Wednesday, November 30, 2022

ಮುತ್ತಿಕ್ಕಲು ಹೋದವನಿಗೆ ನಾಗರಹಾವೇ ಮುತ್ತಿಕ್ಕಿತು!

Follow Us

newsics.com

ಶಿವಮೊಗ್ಗ: ನಾಗರಹಾವಿಗೆ ಮುತ್ತಿಡಲು ಹೋಗಿ ವ್ಯಕ್ತಿಯೊಬ್ಬ ಹಾವಿನಿಂದ ತುಟಿಗೆ ಕಚ್ಚಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ನಗರದ ಬೊಮ್ಮನಕಟ್ಟೆ ನಿವಾಸಿ ಅಲೆಕ್ಸ್ , ನಾಗರ ಹಾವನ್ನು ಹಿಡಿದು ಮುತ್ತಿಡುವಾಗ ಹಾವು ಏಕಾಏಕಿ ತಿರುಗಿ ಆತನ ತುಟಿಗೆ ಕಚ್ಚಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

ಅಲೆಕ್ಸ್ ಹಾಗೂ ರೋನಿ ಎಂಬವರು ಹಾವುಗಳನ್ನು ಸುರಕ್ಷಿತವಾಗಿ ಹಿಡಿದು ಸಂರಕ್ಷಣೆ ಮಾಡುವುದನ್ನು ಪ್ರವೃತ್ತಿ ಮಾಡಿಕೊಂಡಿದ್ದಾರೆ. ಮೊನ್ನೆ ಬೊಮ್ಮನಕಟ್ಟೆಯ ಮದುವೆ ಮನೆಯಲ್ಲಿ ಒಟ್ಟಿಗೆ ಎರಡು ನಾಗರ ಹಾವು ಕಾಣಿಸಿಕೊಂಡಿದೆ. ಎರಡು ಹಾವುಗಳನ್ನು ಹಿಡಿದಿದ್ದು, ಈ ವೇಳೆ ಒಂದು ಹಾವಿಗೆ ಗಾಯವಾಗಿದೆ. ‌ ಈ ವೇಳೆ ಒಂದು ಹಾವಿಗೆ ಮುತ್ತಿಕ್ಕಲು ಹೋದಾಗ ಹಾವು ತಿರುಗಿ ಕಚ್ಚಿದೆ. ಹಾವು ಕಚ್ಚಿದರೂ ಇವರು ಅವುಗಳ ನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ನಂತರ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಉರಗ ತಜ್ಞ ಅಲೆಕ್ಸ್  ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದೇವಸ್ಥಾನಕ್ಕೆ ​1 ಕೆಜಿ 16 ತೊಲೆ ಚಿನ್ನ ಅರ್ಪಿಸಿದ ಸಿಎಂ ಕೆಸಿಆರ್

ಮತ್ತಷ್ಟು ಸುದ್ದಿಗಳು

vertical

Latest News

ವಿಮಾನ ನಿಲ್ದಾಣಗಳ ಸುತ್ತಮುತ್ತ 5ಜಿ ನಿಷೇಧ

newsics.com ನವದೆಹಲಿ:  ವಿಮಾನ ನಿಲ್ದಾಣಗಳ ಸುತ್ತಮುತ್ತ 5ಜಿ ನೆಟ್‌ವರ್ಕ್ ಒದಗಿಸಬಾರದು (ಸಿ–ಬ್ಯಾಂಡ್) ಎಂದು ಟೆಲಿಕಾಂ ಇಲಾಖೆ ಆದೇಶ ಮಾಡಿದೆ. ವಿಮಾನ ನಿಲ್ದಾಣದ ಸುತ್ತಮುತ್ತ 2.1 ಕಿಲೋಮೀಟರ್ ವ್ಯಾಪ್ತಿಯಲ್ಲಿ  5ಜಿ...

ಹಾಕಿ ಟೆಸ್ಟ್‌- 13 ವರ್ಷದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಗೆದ್ದ ಭಾರತ

newsics.com ಸಿಡ್ನಿ: ಹಾಕಿ ಟೆಸ್ಟ್‌ ನಲ್ಲಿ ಭಾರತ 13 ವರ್ಷದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಗೆದ್ದಿದೆ. ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಹಾಕಿ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡ 4 3 ಗೋಲ್ ಗಳ...

ಕುಕ್ಕರ್ ಬಾಂಬರ್‌ ಶಾರೀಕ್ ಖಾತೆಗೆ ಹಣ ವರ್ಗಾವಣೆ

newsics.com ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಶಾರೀಕ್‌ಗೆ ಡಾಲರ್‌ಗಳ ಮೂಲಕ ಆತನ ಖಾತೆಗೆ ವರ್ಗಾವಣೆಯಾಗುತ್ತಿದ್ದು ಎನ್ನುವ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ. ಶಾರೀಕ್‌ ಡಾರ್ಕ್ ವೆಬ್ ಮೂಲಕ ಖಾತೆ ತೆರೆದಿದ್ದು, ಡಾಲರ್‌ಗಳ ಮೂಲಕ...
- Advertisement -
error: Content is protected !!