ಒಟ್ಟಾವಾ: ಪತ್ನಿಯ ಹಿಂಸೆಯಿಂದ ಕಂಗೆಟ್ಟಿದ್ದ ಉದ್ಯಮಿಯೊಬ್ಬ ಆಕೆಗೆ ಹಣ ಸಿಗಬಾರದು ಎಂಬ ಉದ್ದೇಶದಿಂದ ಏಳು ಕೋಟಿಗೂ ಹೆಚ್ಚು ಹಣವನ್ನು ಸುಟ್ಟುಹಾಕಿರುವ ಅಚ್ಚರಿಯ ಪ್ರಕರಣ ಕೆನಡಾದ ಒಟ್ಟಾವಾದಲ್ಲಿ ನಡೆದಿದೆ.
ವಿಚ್ಛೇದನ ಪಡೆಯುವ ವೇಳೆ ಈ ಕೃತ್ಯ ನಡೆಸಿದ್ದಾನೆ. ಇದಕ್ಕಾಗಿ ಅಚ್ಚರಿ ವ್ಯಕ್ತಪಡಿಸಿರುವ ನ್ಯಾಯಾಧೀಶರು ಉದ್ಯಮಿಗೆ ಒಂದು ತಿಂಗಳು ಜೈಲು ಶಿಕ್ಷೆ ವಿಧಿಸಿದ್ದಾರೆ.
ಪತ್ನಿಗೆ ಪರಿಹಾರವಾಗಿ ನನ್ನ ಹಣ ಸಿಗಬಾರದು ಎನ್ನುವ ಕಾರಣಕ್ಕೆ 55 ವರ್ಷದ ಉದ್ಯಮಿ ಬ್ರೂಸ್ ಮೆಕಾನ್ವಿಲ್ಲೆ 10 ಲಕ್ಷ ಡಾಲರ್ ಅಂದರೆ ಸುಮಾರು 7.13 ಕೋಟಿ ರೂಪಾಯಿಗಳನ್ನು ಸುಟ್ಟು ಹಾಕಿದ್ದಾನೆ. ಪತ್ನಿ ಹಾಗೂ ಮಕ್ಕಳಿಗೆ ಈ ಹಣ ಸೇರಬಾರದು ಎನ್ನುವ ಕಾರಣಕ್ಕೆ ಈ ಕೃತ್ಯವೆಸಗಿದ್ದಾಗಿ ಬ್ರೂಸ್ ಹೇಳಿದ್ದಾನೆ. 22 ವಿವಿಧ ಬ್ಯಾಂಕ್ ಗಳಲ್ಲಿದ್ದ ಹಣವನ್ನು ವಿತ್ ಡ್ರಾ ಮಾಡಿ ತಂದು ಸುಟ್ಟಿದ್ದೇನೆ ಎಂದಿದ್ದಾನೆ. ಇದಕ್ಕೆ ರಸೀದಿಯಿದೆ ಎಂದೂ ಹೇಳಿದ್ದಾನೆ.
ಪತ್ನಿ ಹಿಂಸೆಗೆ ಬೇಸತ್ತು ಏಳು ಕೋಟಿ ಹಣ ಸುಟ್ಟ ಉದ್ಯಮಿ!
Follow Us