NEWSICS.COM
ಅಮೆರಿಕ: ಹೆಪ್ಪುಗಟ್ಟಿದ ಕೊಳದಲ್ಲಿ ಜಿಂಕೆಯೊಂದು ಸಿಲುಕಿ ಹೊರಬರಲಾಗದೆ ಒದ್ದಾಡುತ್ತಿತ್ತು. ಅದನ್ನು ಗಿಲ್ ಲೆನ್ ಕೋರ್ ಎನ್ನುವ ವ್ಯಕ್ತಿ ಜಿಂಕೆಯನ್ನು ನಿಧಾನವಾಗಿ ತಳ್ಳುತ್ತಾ ಮುಂದೆ ಸಾಗುವಂತೆ ಮಾಡಿದ್ದಾರೆ. ಕೊಳ ಬಿರುಕು ಬಿಡುವ ಭಯದಲ್ಲೇ ಸಾಗಿದ ಅವರು ಕೊನೆಗೂ ಜಿಂಕೆಯನ್ನು ದಡತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಳದ ನೀರು ಗಟ್ಟಿಯಾಗಿ ಇರುವುದರಿಂದ ಜಿಂಕೆಗೆ ನಡೆಯಲು ಕಷ್ಟಪಡುತ್ತಿತ್ತು. ದಡ ಸೇರಿದ ಜಿಂಕೆ ಖುಷಿಯಿಂದ ಕಾಡು ಸೇರಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.
ಡ್ಯಾನಿ ಡೆರಾನಿ ಆರ್ ದಿ ಕಿಂಗ್ ಆಫ್ ಜಿಂಗ್ಲಿಂಗ್ ಎನ್ನುವವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು , ಗಿಲ್ ಅವರ ಕಾರ್ಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
Because you want to see a man saving a deer that is stuck on a frozen lake back to safety. pic.twitter.com/ihZSUJIwql
— Danny Deraney (@DannyDeraney) December 24, 2020