Tuesday, March 2, 2021

ನೆಟ್ಟಿಗರ ಗಮನ ಸೆಳೆದ ಧರ್ಮಸ್ಥಳದ ಎತ್ತಿನಗಾಡಿ ಕಾರು!

NEWSICS.COM

ಧರ್ಮಸ್ಥಳ: ಹಳೆಯ ಅಂಬಾಸಿಡರ್ ಕಾರಿನ ಹಿಂಭಾಗ ಬಳಸಿ ತಯಾರಿಸಿದ ಎತ್ತಿನ ಗಾಡಿ ಎಲ್ಲೆಡೆ ವೈರಲ್ ಆಗಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಕಲ್ಪನೆಯಲ್ಲಿ ಉಜಿರೆ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಸೇರಿ ಇದನ್ನು ತಯಾರಿಸಿದ್ದಾರೆ. ಅಂಬಾಸಿಡರ್ ಕಾರಿನ ಹಿಂಭಾಗ ಬಳಸಿ ಮುಂದೆ ಎರಡು ಎತ್ತುಗಳು ಎಳೆಯುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಇದರ ವಿಡಿಯೋವನ್ನು ಉದ್ಯಮಿ ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದು ಎಲ್ಲೆಡೆ ವೈರಲ್ ಆಗಿದೆ. ಇದರಲ್ಲಿ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರು ಸಾಗುತ್ತಾರೆ. ಇಂಧನದ ಖರ್ಚಿಲ್ಲದೆ, ಪರಿಸರ ಸ್ನೇಹಿಯಾಗಿರುವ ಈ ವಾಹನ ಎಲ್ಲರ ಗಮನ ಸೆಳೆದಿದೆ.

ಅದೇ ರೀತಿ ಧರ್ಮಸ್ಥಳದಲ್ಲಿ ವಾರಕ್ಕೊಮ್ಮೆ ಓಡಾಡುವ ರಬ್ಬರ್ ಚಕ್ರದ ಗಾಡಿ ಕೂಡ ಎಲ್ಲರ ಗಮನ ಸೆಳೆದಿದೆ. ಆಧುನಿಕ ಜೀವನಶೈಲಿಯಲ್ಲಿ ಪರಿಸರ ಸ್ನೇಹಿ ವಾಹನಗಳನ್ನು ನಿರ್ಮಿಸಿ ಧರ್ಮಸ್ಥಳ ಮತ್ತೆ ಮಾದರಿಯಾಗುತ್ತಿದೆ.

ಮತ್ತಷ್ಟು ಸುದ್ದಿಗಳು

Latest News

ಯುವತಿಯೊಂದಿಗಿನ ವಿಡಿಯೋ: ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲು

newsics.com ಬೆಂಗಳೂರು: ನೌಕರಿ ಕೊಡಿಸುವುದಾಗಿ ಹೇಳಿ ಯುವತಿಗೆ ಆಮಿಷವೊಡ್ಡಿ ಸಚಿವ ರಮೇಶ್ ಜಾರಕಿಹೊಳಿ ಆಕೆಯನ್ನು ಲೈಂಗಿಕವಾಗಿ ಬಳಕೆಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಿಹಳ್ಳಿ ಆರೋಪಿಸಿ ದೂರು...

ರಾಜ್ಯಸಭೆ, ಲೋಕಸಭೆ ಟಿವಿ ಇನ್ನು ‘ಸಂಸದ್ ಟಿವಿ’

newsics.com ನವದೆಹಲಿ: ರಾಜ್ಯ ಸಭಾ ಮತ್ತು ಲೋಕ ಸಭಾ ಟಿವಿಯನ್ನು ವಿಲೀನ ಮಾಡಲಾಗಿದ್ದು, ಇನ್ನು 'ಸಂಸದ್ ಟಿವಿ' ಎಂದು ಕರೆಯಲಾಗುತ್ತದೆ. ರಾಜ್ಯ‌ ಸಭೆ ಹಾಗೂ ಲೋಕ ಸಭೆ ಕಲಾಪಗಳನ್ನು ಪ್ರಸಾರ ಮಾಡುತ್ತಿದ್ದ ರಾಜ್ಯ ಸಭಾ ಮತ್ತು...

ಮೈಸೂರಿನ ಸುಧಾ ಹೆಗಡೆಗೆ ಅತ್ಯುತ್ತಮ ಅಭಿನಯ ಪ್ರಶಸ್ತಿ

newsics.com ಮೈಸೂರು: ಮೈಸೂರಿನ ಸುಧಾ ಹೆಗಡೆ ಅವರಿಗೆ ಅತ್ಯುತ್ತಮ ಅಭಿನಯ ಪ್ರಶಸ್ತಿ ದೊರಕಿದೆ. ಬೆಂಗಳೂರಿನಲ್ಲಿ ಆಯೋಜಿಸಿದ್ದ ಬ್ಯುಸಿನೆಸ್ ಬೈ ಬ್ರಾಹ್ಮಿನ್ಸ್ ಪ್ರಾದೇಶಿಕ ಸಮ್ಮೇಳನದಲ್ಲಿ 'ಗೆಲುವಿನೆಡೆಗೆ' ಎಂಬ ನಾಟಕದ ಅಭಿನಯಕ್ಕೆ ಈ ಪ್ರಶಸ್ತಿ ದೊರಕಿದೆ. ನಾಟಕವನ್ನು ಎಂ.ಸಿ ಕೃಷ್ಣಪ್ರಸಾದ್...
- Advertisement -
error: Content is protected !!