NEWSICS.COM
ಸಾಮಾನ್ಯವಾಗಿ ಸಾಕು ನಾಯಿಗಳೊಂದಿಗೆ ಮಾನವನ ಬಾಂಧವ್ಯ ಅಗಾಧವಾಗಿಯೇ ಇರುತ್ತದೆ. ಕೆಲವೊಮ್ಮೆ ಮನುಷ್ಯನಿಗಿಂತ ನಾಯಿಗಳಿಗೆ ಮಾನವೀಯತೆ ಮತ್ತು ಪ್ರೀತಿ ಹೆಚ್ಚೆಂದು ಹೇಳಬಹುದು.
ಇದಕ್ಕೆ ಉದಾಹರಣೆ ಎಂಬಂತೆ ಇತ್ತೀಚೆಗೆ ಟ್ವಿಟರ್ ನಲ್ಲಿ ನಾಯಿಯೊಂದು ಪುಟ್ಟ ಮಗುವಿಗೆ ಸಹಾಯ ಮಾಡುವ ವೀಡಿಯೋ ಹರಿದಾಡುತ್ತಿದೆ.
ಶಾಲೆಯಿಂದ ಬಸ್ ನಲ್ಲಿ ಬಂದ ಪುಟ್ಟ ಬಾಲಕಿಗಾಗಿ ಬಸ್ ನ ಬಳಿ ನಿಂತು ಕೂಗಿ ಕರೆದು, ಮಗುವಿನ ಬ್ಯಾಗ್ ನ್ನು ತನ್ನ ಬಾಯಲ್ಲಿ ಹಿಡಿದು ಪ್ರೀತಿಯಿಂದ ಸ್ವಾಗತಿಸುವ ಪ್ರಕ್ರಿಯೆ ಕಿರು ವೀಡಿಯೋದಲ್ಲಿ ಸೆರೆಯಾಗಿದೆ.
ನಾಯಿಗಳು ಮಾಲೀಕರ ಮೇಲೆ ತೋರುವ ಪ್ರೀತಿ, ನಿಷ್ಠೆ ನಿಜಕ್ಕೂ ಎಂತಹವರನ್ನೂ ಅಚ್ಚರಿಪಡಿಸುತ್ತದೆ. ಟ್ವಿಟರ್ ನಲ್ಲಿ ಈ ವೀಡಿಯೊ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
https://twitter.com/akkitwts/status/1322559532891955200?s=08