newsics.com
ನವದೆಹಲಿ: ಕೊರೋನಾ ಹೋರಾಟದಲ್ಲಿ ಜನತೆಗೆ ಸಹಾಯ ಮಾಡುತ್ತಿರುವ ಸೋನು ಸೂದ್ ಎಲ್ಲರಿಗೂ ಪರಿಚಯ. ಹೀಗಿರುವಾಗ ಯುವಕನೊಬ್ಬ ಬ್ರದರ್, ನನ್ನ ಗರ್ಲ್ಫ್ರೆಂಡ್ ಐಫೋನ್ ಕೇಳುತ್ತಿದ್ದಾಳೆ. ಅದಕ್ಕಾಗಿ ನಿಮ್ಮಿಂದ ಏನಾದರೂ ಸಹಾಯ ಮಾಡಲು ಸಾಧ್ಯವಾಗುತ್ತದೆಯೇ? ಎಂದು ಸೋನು ಸೂದ್ ಬಳಿ ಕೇಳಿದ್ದಾನೆ.
ಇದಕ್ಕೆ ಸೋನು ಸೂದ್ ಕೂಡ ತಮಾಷೆಯಾಗಿಯೇ ಉತ್ತರಿಸಿದ್ದು, ನಿಮ್ಮ ಗೆಳತಿ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನಾನು ಒಂದು ವೇಳೆ ಐಫೋನ್ ನೀಡಿದ್ರೆ ಅದರಿಂದ ನಿಮಗೆ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ ಎಂದಿದ್ದಾರೆ.ಸೋನು ಸೂದ್ ಪ್ರತಿಕ್ರಿಯೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಫೋಸ್ಟ್ ವೈರಲ್ ಆಗಿದೆ.
उसका तो पता नहीं,
अगर iphone दिया तो पर तेरा कुछ नहीं रहेगा😂 https://t.co/t99rnT8z22— sonu sood (@SonuSood) June 22, 2021