newsics.com
ಹಿಮಾಚಲ ಪ್ರದೇಶ: ರಷ್ಯಾ, ಉಕ್ರೇನ್ ನಡುವಿನ ಯುದ್ಧ ಇನ್ನೂ ನಿಂತಿಲ್ಲ. ಆದರೆ ಇತ್ತ ರಷ್ಯಾದ ಪುರುಷ ಮತ್ತು ಉಕ್ರೇನ್ನ ಮಹಿಳೆ ಮಧ್ಯೆ ಪ್ರೇಮಾಂಕುರವಾಗಿ ಈಗ ಮದುವೆಯಾಗಿದ್ದಾರೆ.
ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿನ ದಿವ್ಯ ಆಶ್ರಮ ಖರೋಟಾದಲ್ಲಿ ಆಗಸ್ಟ್ 2ರಂದು, ಉಕ್ರೇನ್ನ ತಮ್ಮ ಪ್ರೇಯಸಿ ಎಲೋನಾ ಬ್ರಮೋಕಾ ಅವರನ್ನು ರಷ್ಯಾ ಪ್ರಜೆ ಸೆರ್ಜೈ ನೋವಿಕೋವ್ ಅವರು ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಮದುವೆಯಲ್ಲಿ ಕೆಂಪು ಮತ್ತು ಚಿನ್ನದ ಬಣ್ಣದ ಲೆಹೆಂಗಾ ತೊಟ್ಟ ವಧು ಎಲೋನಾ ಮತ್ತು ಕಂದು ಬಣ್ಣದ ಕುರ್ತಾ ಪೈಜಾಮಾ ಹಾಗೂ ನೆಹರೂ ಜಾಕೆಟ್ ಧರಿಸಿದ್ದರು. ಈ ಸಂಭ್ರಮದ ಕ್ಷಣಗಳ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ ಏನಿದೆ..?: ಅಲಂಕೃತ ಮಂಟಪದಲ್ಲಿ ಪುರೋಹಿತರು ಮಂತ್ರ ಹೇಳುತ್ತಾ ನೀಡುವ ಎಲ್ಲ ಸಂಪ್ರದಾಯದ ಸೂಚನೆಗಳನ್ನು ಪಾಲಿಸಿದ್ದಾರೆ. ಜತೆಗೆ ಸಪ್ತಪದಿ ತುಳಿದಿದ್ದಾರೆ. ಸ್ಥಳೀಯರು ಈ ಮದುವೆಯಲ್ಲಿ ಭಾಗಿಯಾಗಿದ್ದರು. ಹಿಮಾಚಲದ ಸಾಂಪ್ರದಾಯಿಕ ಜಾನಪದ ಹಾಡುಗಳ ತಾಳಕ್ಕೆ ಕುಣಿದ ಸ್ಥಳೀಯರು, ಮದುವೆಗೆ ಮೆರಗು ನೀಡಿದರು. ದೇಸಿ ಶೈಲಿಯಲ್ಲಿ ನಡೆದ ವಿದೇಶಿ ಮದುವೆಗೆ ಕಾಂಗ್ರಿ ಧಾಮದ ಅನೇಕ ಅತಿಥಿಗಳು ಹಾಜರಿದ್ದರು.
ಚುನಾವಣೆಯಲ್ಲಿ ಗೆದ್ದಿದ್ದು ಪತ್ನಿಯರು, ಪ್ರಮಾಣವಚನ ಸ್ವೀಕರಿಸಿದ್ದು ಪತಿ ಮಹಾಶಯರು
ಭಾರತಕ್ಕೆ ಬಂತು ಮತ್ತೊಂದು ಚಿನ್ನ: ಕುಸ್ತಿಯಲ್ಲಿ ಗೆದ್ದು ಸಂಭ್ರಮಿಸಿದ ಬಜರಂಗ ಪೂನಿಯಾ