ನೆದರ್ಲೆಂಡ್: ಪ್ರೇಮ ಕುರುಡು ಎಂಬ ಮಾತು ಸಾರ್ವಕಾಲಿಕ ಸತ್ಯ.
ಕಳೆದ ಆರು ವರ್ಷಗಳಿಂದ ಪ್ಲೇನ್ನೊಂದಿಗೆ ಡೇಟಿಂಗ್ ಮಾಡಿದ್ದ ಈಕೆ, ಇದೇ ಮಾರ್ಚ್ನಲ್ಲಿ ಅದರೊಂದಿಗೆ ವಿವಾಹವಾಗಲಿದ್ದಾರೆ!
ಜರ್ಮನಿಯ ಬರ್ಲಿನ್ನ ಮೈಕೆಲೆ ಕೋಬ್ಕೆ ಎಂಬ ಈ ಯುವತಿ ತನ್ನ ಕನಸಿನ ಬೋಯಿಂಗ್ 737-800 ವಿಮಾನವನ್ನು ನೆದರ್ಲೆಂಡ್ಸ್ನಲ್ಲಿ ವರಿಸಲಿದ್ದಾರೆ. ಬರ್ಲಿನ್ನ ಟೆಗೆಲ್ ವಿಮಾನ ನಿಲ್ದಾಣದಲ್ಲಿ 2014ರಲ್ಲಿ ಮೊದಲ ಬಾರಿಗೆ ಈ ವಿಮಾನ ಕಂಡಾಗಲೇ ಅದರ ಮೇಲೆ ಲವ್ ಆಗಿತ್ತಂತೆ.
ಈ ವಿಮಾನವನ್ನು ಡಾರ್ಲಿಂಗ್ ಎಂದು ಕರೆಯುವ ಈಕೆ, ವಿಮಾನದ ರೆಕ್ಕೆ ಮೇಲೆ ನಿಂತು ಅದಕ್ಕೊಂದು ಕಿಸ್ ಕೊಡುತ್ತಿರುವ ಫೋಟೋ ಎಲ್ಲೆಡೆ ವೈರಲ್ ಆಗಿದೆ.
ಈಕೆ ವಿಮಾನವನ್ನೇ ಮದುವೆಯಾಗ್ತಿದ್ದಾಳೆ!
Follow Us