newsics.com
ಹುಲಿ, ಸಿಂಹ ಹಾಗೂ ಚಿರತೆಗಳಂತಹ ಪ್ರಾಣಿಗಳ ಜೊತೆ ನಾವು ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಹ ಕಡಿಮೆಯೇ. ಆದರೆ ಇಲ್ಲೊಬ್ಬ ವ್ಯಕ್ತಿ ಸಿಂಹದ ಬೋನಿನಲ್ಲಿ ಕೈ ಹಾಕುವ ಹುಚ್ಚು ಸಾಹಸ ಪ್ರದರ್ಶಿಸಲು ಹೋಗಿ ತನ್ನ ಕೈ ಬೆರಳುಗಳನ್ನೇ ಕಳೆದುಕೊಂಡ ಘಟನೆಯೊಂದು ನಡೆದಿದೆ.
ಜಮೈಕಾದಲ್ಲಿರುವ ಮೃಗಾಲಯಕ್ಕೆ ಆಗಮಿಸಿದ್ದ ಪ್ರವಾಸಿಗನೊಬ್ಬ ಬೋನಿನಲ್ಲಿದ್ದ ಸಿಂಹದ ಜೊತೆ ಆಟವಾಡುತ್ತಿದ್ದ. ಮೊದಲೇ ಸಿಟ್ಟಿನಲ್ಲಿದ್ದ ಸಿಂಹ ಈತ ಬೋನಿನ ಒಳಗೆ ಪದೇ ಪದೇ ಕೈ ಹಾಕುತ್ತಿದ್ದುದನ್ನು ಕಂಡು ಆತನ ಕೈಗೆ ಬಾಯಿ ಹಾಕಿದೆ. ಸಿಂಹದ ಬಾಯಿಯಿಂದ ಕೈಯನ್ನು ತಪ್ಪಿಸಿಕೊಳ್ಳಲು ಯುವಕ ಯತ್ನಿಸಿದರೂ ಸಹ ಅದು ಸಾಧ್ಯವಾಗಲಿಲ್ಲ. ಈತನ ಕೈ ಬೆರಳುಗಳು ತುಂಡರಿಸಿ ಹೋಗಿದ್ದು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
https://twitter.com/OneciaG/status/1528082220547809281?t=DlRmKevrZiMJUShYSGdXPw&s=19