ನವದೆಹಲಿ: ಸಾಕುನಾಯಿಯೊಂದು ಹೆಲ್ಮೆಟ್ ಧರಿಸಿ ಸ್ಕೂಟರ್ ನಲ್ಲಿ ಸಾಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದುಮಾಡುತ್ತಿದೆ.
ಚೆನ್ನೈನಲ್ಲಿ ಈ ವಿಡಿಯೋ ಸೆರೆಹಿಡಿಯಲಾಗಿದ್ದು, ಜಾಲತಾಣದಲ್ಲಿ ಹರಿಬಿಟ್ಟ ದಿನದಿಂದ ಈವರೆಗೆ ಈ ವಿಡಿಯೋ 5 ಸಾವಿರಕ್ಕೂ ಹೆಚ್ಚು ಜನರ ಮನ ಗೆದ್ದಿದೆ. 66 ಸಾವಿರಕ್ಕೂ ಹೆಚ್ಚು ವೀಕ್ಷಿಸಿದ್ದು, ಸಾವಿರಕ್ಕೂ ಅಧಿಕ ರೀಟ್ವೀಟ್ ಪಡೆದುಕೊಂಡಿದೆ.