Wednesday, May 31, 2023

ಟಿ.ಆರ್. ಅನಂತರಾಮು; ಅನಂತ ಕರ್ತೃತ್ವ ಶಕ್ತಿ

Follow Us

ವಿಶ್ವಕೋಶ ರಸಯಾತ್ರೆ – 5

 
* ನವೀನ್ ಕಲ್ಗುಂಡಿ
response@134.209.153.225
ksn.bird@gmail.com

ನ್ನಡ ವಿಶ್ವಕೋಶದ ಡಿಜಿಟಲ್ ಆವೃತ್ತಿಯನ್ನು ಅಭಿವೃದ್ಧಿ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಾಗ, ಮುದ್ರಣದಲ್ಲಿದ್ದ ವಿಶ್ವಕೋಶವನ್ನು ಸಿಡಿ/ಡಿವಿಡಿಗೆ ತರುವುದು, ಬಹುಮಾಧ್ಯಮ (ಮಲ್ಟಿಮೀಡಿಯಾ) ಅಳವಡಿಕೆಗಳೊಂದಿಗೆ ಎಂದಿತ್ತು.

ವಿಶ್ವಕೋಶದಲ್ಲಿ ಒಟ್ಟು ಹದಿನೈದು ಸಾವಿರ ಲೇಖನಗಳಿದ್ದವು! ಒಂದೊಂದರ ಗಾತ್ರ ಒಂದೊಂದು! ವಿಶ್ವಕೋಶ ಅಕಾರಾದಿಯಲ್ಲಿ ಪ್ರಕಟವಾದ್ದರಿಂದ ಅನೇಕ ಲೇಖನಗಳಿಗೆ ಪರಿಷ್ಕರಣ ಅತ್ಯಗತ್ಯವಾಗಿತ್ತು. ವಿಜ್ಞಾನವಂತೂ ಸರಿಯೇ ಸರಿ. ಇದನ್ನು ಮನಗಂಡೇ ವಿಶ್ವಕೋಶವನ್ನು ವಿಜ್ಞಾನ ಮತ್ತು ಮಾನವಿಕ ಎಂಬ ಎರಡು ಬೃಹತ್ ಗುಂಪುಗಳನ್ನಾಗಿ ವಿಂಗಡಿಸಿ, ನಾವು ವಿಜ್ಞಾನ ವಿಭಾಗವನ್ನು ಪರಿಷ್ಕರಿಸುವುದು ಹಾಗೂ ವಿಶ್ವವಿದ್ಯಾಲಯ ಮಾನವಿಕ ವಿಭಾಗದ ಲೇಖನಗಳನ್ನು ಪರಿಷ್ಕರಿಸುವುದು ಎಂದು ತೀರ್ಮಾನವಾಯಿತು.

ಆಷ್ಟೊತ್ತಿಗಾಗಲೇ ನಮ್ಮಲ್ಲಿ ಒಂದು ಸಂಪಾದಕರ ಸಮಿತಿ ರಚನೆಯಾಗಿತ್ತು. ವಿಜ್ಞಾನದ ವಿಭಾಗ ಸಂಪಾದಕರು ಡಾ ಟಿ ಆರ್ ಅನಂತರಾಮು Thalagunda Anantharamu ಅವರು! ಅವರ ಪರಿಚಯ ನನಗೆ ಇತ್ತಾದರೂ ಅವರ ಕರ್ತೃತ್ವ ಶಕ್ತಿಯನ್ನು ಕಂಡದ್ದು ಈ ಸಂದರ್ಭದಲ್ಲಿಯೇ! ವಿಶ್ವಕೋಶದ ಮೊದಲ ಸಂಪುಟ ಪ್ರಕಟವಾದದ್ದು 1969 ರಲ್ಲಿ! ನಾವು ಪರಿಷ್ಕರಣೆಗೆ ತೊಡಗಿದ್ದು 2004ರಲ್ಲಿ. ಆ ಅಕ್ಷರದ ಅಂತರಿಕ್ಷ ಯೋಜನೆಗಳು, ಅಂಟಾರ್ಟಿಕ ಏನಾಗಿರಬೇಡ! ಎಲ್ಲ ವಿಜ್ಞಾನ ಲೇಖನಗಳನ್ನು ಮುದ್ರಿಸಿಕೊಳ್ಳಲಾಯಿತು. ಒಟ್ಟು ಮೂರು ಸಾವಿರ ಲೇಖನಗಳಾದವು! ಈ ಎಲ್ಲವನ್ನು ಓದಿ, ವಿಂಗಡಿಸಿ ಆಯಾ ಕ್ಷೇತ್ರದ ತಜ್ಞರಿಗೆ ಕಳಿಸಿಕೊಡುವ ಕಾರ್ಯ ಮೊದಲಾಯಿತು. ಇದರಲ್ಲಿ ಇವರ ಪಾಲು ಬಹುದೊಡ್ಡದು. ವಿವಿಧ ಕ್ಷೇತ್ರದ ತಜ್ಞರನ್ನು ಗುರುತಿಸಿ, ಅವರೊಂದಿಗೆ ಮಾತನಾಡಿ ಲೇಖನಗಳನ್ನು ಕಳಿಸಿಕೊಟ್ಟೆವು. ಈ ಎಲ್ಲ ಲೇಖನಗಳು ಪರಿಷ್ಕೃತವಾಗಿ ಹಿಂಧಕ್ಕೆ ಬರಬೇಕು. ಹೀಗೆ ಬಂದದ್ದನ್ನು ಬೆರಳಚ್ಚು ಮಾಡಿ, ಮುದ್ರಿಸಿ ಟಿಆರ್‍ಎ ಅವರಿಗೆ ಕಳಿಸುವುದು. ಅವರು ನೋಡಿ ಕಳಿಸಿದ ಮೇಲೆ ಅದಕ್ಕೆ ವಿಶ್ವಕೋಶದಲ್ಲಿ ಸ್ಥಾನ!

ಅನೇಕ ಲೇಖನಗಳು ವಿಶ್ವಕೋಶದಲ್ಲಿ ಇರಲಿಲ್ಲ, ಅಂದರೆ ಆಗ ಆ ಕ್ಷೇತ್ರ ಅಷ್ಟು ಬೆಳದಿರಲಿಲ್ಲ. ಹೀಗೆ ಹೊಸದಾಗಿ ಸೇರಿಸಬೇಕಾದ ಲೇಖನಗಳನ್ನು ಪಟ್ಟಿ ಮಾಡಿ, ತಜ್ಞರಿಂದ ಬರೆಯಿಸಿ ವಿಶ್ವಕೋಶಕ್ಕೆ ಸೇರಿಸಲಾಯಿತು. ಸ್ವತಃ ಟಿಆರ್ ಎ ಅವರು ಅದೆಷ್ಟೋ ಲೇಖನಗಳನ್ನು ಬರೆದರು, ಅವರ ಮಡದಿ ಬೆರಳಚ್ಚು ಮಾಡಿಕೊಟ್ಟರು.

ಇನ್ನು ಬಹುಮಾಧ್ಯಮ ಅಡಿಯೊ, ವಿಡಿಯೋ ಮತ್ತು ಚಿತ್ರಗಳು. ಅಂದು ಈ ಯಾವುದೂ ಇಷ್ಟು ಸುಲಭವಾಗಿ ಸಿಗುತ್ತಿರಲಿಲ್ಲ. ಚಿತ್ರ ಸಿಗುವುದೇ ಕಷ್ಟವಿದ್ದಾಗ ಇನ್ನು ಆಡಿಯೊ ವಿಡಿಯೋ ಎಲ್ಲಿಂದ ತರೋಣ! ತಂದ ಮೇಲೆ ಅವುಗಳನ್ನು ಬಳಸಲು ಅನುಮತಿಗಾಗಿ ಮತ್ತೊಂದು ಸುತ್ತು ಹೋರಾಟ! ಈ ಎಲ್ಲ ನಡೆದ ನಂತರ ಇವನ್ನು ವಿಶ್ವಕೋಶದಲ್ಲಿ ಸೂಕ್ತವಾಗಿ ಅಳವಡಿಸಲಾಯಿತು. ಪ್ರತೀ ಹಂತದಲ್ಲಿ ಟಿಆರ್ ಎ ಪರಿಶೀಲಿಸುತ್ತಿದ್ದರು. ಹಿಂದೆ ಹೇಳಿದ ಯೂರೋಪಿಯನ್ ಸ್ಪೇಸ್‍ ಏಜೆನ್ಸಿಯ ವಿಡಿಯೋದಲ್ಲಿದ್ದ ಮಾಹಿತಿಯನ್ನು ಬರೆದುಕೊಂಡು ಕನ್ನಡಕ್ಕೆ ಅನುವಾದಿಸಿ, ಸ್ಟುಡಿಯೋದಲ್ಲಿ ವಿಡಿಯೋಗೆ ಈ ಹೊಸ ಆಡಿಯೋ ಸೇರಿಸಿ ಹಾಕಿದ್ದು ಇವರ ಮಾರ್ಗದರ್ಶನದಲ್ಲಿ ಮಾತ್ರವಲ್ಲ, ಆ ಯೋಜನೆ/ಯೋಚನೆಯೂ ಅವರದ್ದೇ!

ಒಟ್ಟಾರೆ ಕಳೆದ ಶತಮಾನದ ಎರಡನೇ ಅರ್ಧಭಾಗದ ವಿಜ್ಞಾನವನ್ನು ಹೊಸ ಸಹಸ್ರಮಾನದ ಮೊದಲ ದಶಕದ ವಿಜ್ಞಾನವನ್ನಾಗಿಸಿದ ಶ್ರೇಯದ ಬಹುಪಾಲು ಸಲ್ಲುವುದು ಟಿಆರ್‍ಎ ಅವರಿಗೆ. ಜತೆಗೆ ಪರಿಯೋಜನೆಯ ಉದ್ದಕ್ಕೂ ಜತೆಗಿದ್ದವರು ಅವರು. ಒಂದು ಸಂದರ್ಭದಲ್ಲಿ ಅವರಿಗೆ ಕಣ್ಣಿನ ತೊಂದರೆ ಕಾಣಿಸಿಕೊಂಡಿತು. ಅಂತಹ ಸಂದರ್ಭದಲ್ಲಿಯೂ ಸಹ ಅದನ್ನು ಕಡೆಗಣಿಸಿ ವಿಶ್ವಕೋಶದ ಕೆಲಸವನ್ನು ಮಾಡಿಕೊಟ್ಟವರು ಟಿಆರ್ ಎ.

ಹೀಗೆ ವೈದ್ಯಕೀಯ, ಭೌತವಿಜ್ಞಾನ ಮುಂತಾದ ವಿಭಾಗಗಳನ್ನು ಸಿದ್ಧಮಾಡಿಕೊಟ್ಟವರನ್ನು ಕುರಿತಾಗಿ ಮತ್ತೆ ಬರೆಯುತ್ತೇನೆ.

ಕನ್ನಡ ವಿಜ್ಞಾನ ಬರಹದ ಕ್ಷೇತ್ರದ ಬಹುದೊಡ್ಡ ಹೆಸರು ಟಿಆರ್ ಅನಂತರಾಮು ಅವರದ್ದು. ಅವರ ಸಮಗ್ರ ಲೇಖನಗಳ ಸಂಪುಟಗಳು ಬರಲಿವೆ! ಇದು ಕನ್ನಡ ವಿಜ್ಞಾನ ಲೋಕ ಸಂಭ್ರಮಪಡಬೇಕಾದ ಸಂದರ್ಭ. ಈ ಪರಿಯೋಜನೆ ಯಶಸ್ವಿಯಾಗಲಿ, ಅವರಿಗೆ ಎಲ್ಲ ಶುಭಗಳು ಒದಗಿ ಬರಲಿ! ಹೀಗೆಯೇ ನಮ್ಮ ಇತರ ಎಲ್ಲ ವಿಜ್ಞಾನ ಬರಹಗಾರರ ಸಮಗ್ರ ಬರಹಗಳು ಜನತೆಗೆ ಓದಲು ಸಿಗುವಂತಾಗಲಿ!

Dr. T R Anantaramu

ಮತ್ತಷ್ಟು ಸುದ್ದಿಗಳು

vertical

Latest News

ಸಮುದ್ರಕ್ಕೆ ಬಿತ್ತು ಉತ್ತರ ಕೊರಿಯಾ ಉಡಾಯಿಸಿದ ‘ಗೂಢಚರ್ಯೆ ಉಪಗ್ರಹ’

newsics.com ಸೋಲ್: ಉತ್ತರ ಕೊರಿಯಾ ಬುಧವಾರ ಉಡಾವಣೆ ಮಾಡಿದ ಗೂಢಚರ್ಯೆ ಉಪಗ್ರಹ ಸಮುದ್ರದ ಪಾಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ತಾಂತ್ರಿಕ ಕಾರಣಗಳಿಂದಾಗಿ ಗೂಢಚರ್ಯೆ ಉಪಗ್ರಹ ಸಮುದ್ರಕ್ಕೆ ಬಿದ್ದಿದೆ...

ರಾಜ್ಯದ ಹಲವೆಡೆ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ

newsics.com ಹಾವೇರಿ/ತುಮಕೂರು/ಶಿವಮೊಗ್ಗ: ಇಂದು(ಮೇ 31) ಬೆಳ್ಳಂಬೆಳಗ್ಗೆ ಹಾವೇರಿ, ತುಮಕೂರು ಹಾಗೂ ಶಿವಮೊಗ್ಗದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದಲ್ಲಿರುವ ನಿರ್ಮಿತಿ ಕೇಂದ್ರದ ಇಂಜಿನಿಯರ್ ಮನೆ ಮತ್ತು ಕಚೇರಿ ಮೇಲೆ ಲೋಕಾಯುಕ್ತ ದಾಳಿ...

ಜೂನ್ 4 ರವರೆಗೆ ರಾಜಧಾನಿಯಲ್ಲಿ ಭಾರಿ ಮಳೆ: 8 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

newsics.com ಬೆಂಗಳೂರು: ಬೆಂಗಳೂರಿನಲ್ಲಿ ಜೂನ್ 4ರವರೆಗೂ ಅಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಂಗಳೂರು ಗ್ರಾಮಾಂತರ, ಬೆಂಗಳೂರು...
- Advertisement -
error: Content is protected !!