ವಾಷಿಂಗ್ಟನ್: ಕೋವಿದ್ -19 ಸೋಂಕು ಕುರಿತ ಸುಳ್ಳು ಸುದ್ದಿಗಳನ್ನು ತಡೆಯುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯು ಪ್ರಮುಖ ತಂತ್ರಜ್ಞಾನ ಕಂಪೆನಿಗಳಾದ ಫೇಸ್‌ಬುಕ್, ಅಮೆಜಾನ್ ಮತ್ತು ಗೂಗಲ್‌ನ ಪ್ರತಿನಿಧಿಗಳೊಂದಿಗೆ ಶನಿವಾರ ಸಭೆ ನಡೆಸಿತು.
ಸಭೆಯ ನಂತರ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಆಂಡಿ ಪಟ್ಟಿಸನ್, ತಂತ್ರಜ್ಞಾನ ಕಂಪೆನಿಗಳು ಸುಳ್ಳು ಸುದ್ದಿ ಹಬ್ಬುವುದನ್ನು ತಡೆಯಲು ಸಹಕಾರ ನೀಡುವುದಾಗಿ ಭರವಸೆ ನೀಡಿವೆ. ಈಗಾಗಲೇ ಅವುಗಳು ಸುಳ್ಳು ಮಾಹಿತಿಗೆ ತಡೆ ಹಾಕಿದ್ದು, ಸೋಂಕು ಕುರಿತ ವಾಸ್ತವಾಂಶದ ಸುದ್ದಿಗಳು ಹೊರಬರುತ್ತಿರುವುದರಿಂದ ಜನರಿಗೆ ಹೆಚ್ಚಿನ ಅರಿವು ಮೂಡಲು ಸಾಧ್ಯವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.