ನ್ಯೂಯಾರ್ಕ್: 2020ನೇ ಸಾಲಿನ ಹೊಸ ವರ್ಷದ ಶುಭಾಶಯ, ಹಾರೈಕೆಗಳ ಭರಾಟೆಯಲ್ಲಿ ಜ.1 ರಂದು ವಾಟ್ಸಾಪ್ ನಲ್ಲಿ ವಿಶ್ವಾದ್ಯಂತ ಹರಿದಾಡಿದ ಮೆಸೇಜ್ ಗಳ ಸಂಖ್ಯೆ ಬರೋಬ್ಬರಿ ೧೦,೦೦೦ ಕೋಟಿ!
ಇದರಲ್ಲಿ 1,200 ಕೋಟಿಗೂ ಹೆಚ್ಚು ಚಿತ್ರಗಳೇ ಇವೆ. ಇದರಲ್ಲಿ ಭಾರತೀಯರೇ 2,000 ಕೋಟಿಗೂ ಹೆಚ್ಚು ಸಂದೇಶಗಳನ್ನು ಕಳಿಸಿದ್ದಾರೆ. ಈ ಮೂಲಕ ವಾಟ್ಸಾಪ್ ಹೊಸ ದಾಖಲೆ ನಿರ್ಮಿಸಿದೆ.