ಬಾಗ್ದಾದ್: ಅಪರಿಚಿತ ಬಂದೂಕುಧಾರಿಯ ಗುಂಡಿನ ದಾಳಿಗೆ 16 ಮಂದಿ ಬಲಿಯಾಗಿದ್ದಾರೆ. 50 ಮಂದಿ ಗಾಯಗೊಂಡಿದ್ದಾರೆ.
ಇರಾಕ್ ರಾಜಧಾನಿ ಬಾಗ್ದಾದ್ ಮಧ್ಯಭಾಗದ ಅಲ್-ಖಲಾನಿ ಸ್ಕ್ವೇರ್ನಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನಾ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದವರ ಮೇಲೆ ಅಪರಿಚಿತ ಬಂದೂಕುಧಾರಿ ಗುಂಡಿನ ದಾಳಿ ನಡೆಸಿದ್ದಾನೆ. ದಾಳಿಗೆ ಕಾರಣ ತಿಳಿದುಬಂದಿಲ್ಲ ಎಂದು ಇರಾಕ್ ಅಧಿಕಾರಿಗಳು ತಿಳಿಸಿದ್ದಾರೆ.
ಯುದ್ಧ ಮತ್ತಿತರ ಕಾರಣಗಳಿಂದ ಹದಗೆಟ್ಟಿರುವ ಆರ್ಥಿಕ ವ್ಯವಸ್ಥೆ ಸುಧಾರಿಸುವಂತೆ ಒತ್ತಾಯಿಸಿ ಇರಾಕ್ ಸಾರ್ವಜನಿಕರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಅಪರಿಚಿತನ ಗುಂಡಿನ ದಾಳಿಗೆ ಬಾಗ್ದಾದ್ ನ 16 ಮಂದಿ ಬಲಿ
Follow Us