ತೆಹ್ರಾನ್: ಇರಾನ್ ಮೇಲೆ ವಾಯುದಾಳಿ ನಡೆಸಿ ಅಲ್ಲಿನ ಸೇನಾಧಿಪತಿ ಮೇಜರ್ ಜನರಲ್ ಕಾಸೇಮ್ ಸೊಲೈಮನಿ ಅವರನ್ನು ಹತ್ಯೆ ಮಾಡಿದ ಅಮೆರಿಕದ ವಿರುದ್ಧ ಸಿಡಿದೆದ್ದಿರುವ ಇರಾನ್, ಅಮೆರಿಕದ ಎಲ್ಲಾ ಭದ್ರತಾ ಪಡೆಗಳನ್ನು ‘ಭಯೋತ್ಪಾದಕರು’ ಎಂದು ಘೋಷಿಸಿದೆ.
ಸೊಲೈಮನಿ ಅವರ ಹತ್ಯೆಗೆ ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆ ಮಾಡಿರುವ ಇರಾನ್, ಡ್ರೋನ್ ದಾಳಿ ಪ್ರದೇಶದಲ್ಲಿರುವ ಎಲ್ಲಾ ಅಮೆರಿಕ ಮತ್ತಿತರರ ರಾಷ್ಟ್ರಗಳ ಪಡೆಗಳನ್ನು ಹಿಂದಿರುಗುವಂತೆ ಸೂಚಿಸಿದೆ. ಈಗಾಗಲೇ ಇರಾನ್ ಸಚಿವರೊಬ್ಬರು, ಅಮೆರಿಕ ಅಧ್ಯಕ್ಷ ಟ್ರಂಪ್ ಅನ್ನು ‘ಸೂಟ್ ಧರಿಸಿರುವ ಭಯೋತ್ಪಾದಕ’ ಎಂದು ಕರೆದಿದ್ದಾರೆ.