ಬ್ರಿಟನ್: ಈಗೇನಿದ್ದರೂ ಇ- ಜಮಾನ. ಸಂತೋಷಕ್ಕೆ ಆನ್ಲೈನ್, ಹಸಿವಾದರೆ ಆನ್ಲೈನ್… ಹೀಗೆ ಎಲ್ಲಕ್ಕೂ ಆನ್ಲೈನ್ ಮೊರೆಹೋಗುವ ಕಾಲ ಇದು. ಈ ಮಹಿಳೆ ಮಾಡಿದ್ದೂ ಇದನ್ನೇ. ಹಸಿವಾಯ್ತೆಂದು ಆನ್ಲೈನ್ನಲ್ಲಿ ಊಟ ಬುಕ್ ಮಾಡಿ ಸ್ನಾನಕ್ಕೆ ತೆರಳಿದ್ದಾರೆ. ಆದ್ರೆ ಎಂಟು ದಿನ ಊಟವೇ ಇಲ್ಲದೆ ಆಸ್ಪತ್ರೆ ಸೇರಿದ ಪ್ರಸಂಗವಿದು.ಈ ಘಟನೆ ನಡೆದದ್ದು ಇಂಗ್ಲೆಂಡ್ನ ಲೌಬರೋ ಎಂಬಲ್ಲಿ. ತೀರಾ ಹಸಿವಾಗಿದ್ದ ಮಹಿಳೆಯೊಬ್ಬರು ವಿಲ್ಟ್‌ಶೈರ್ ಫಾರ್ಮ್ ಫುಡ್ಸ್ಗೆ ಕರೆಮಾಡಿ ಊಟಕ್ಕೆ ಆರ್ಡ್ರ್ ಮಾಡಿ ಸ್ನಾನಕ್ಕೆ ತೆರಳಿದ್ದಾಳೆ. ಆರ್ಡ್ರ್ ಪಡೆದ ಹೋಟೆಲ್ ಸಿಬ್ಬಂದಿ ಡಾನ್ ಜಾಕ್ಸನ್ ಊಟ ಸಿದ್ಧಗೊಳಿಸಿ ಆಕೆಗೆ ಕರೆ ಮಾಡಿದ್ದಾನೆ. ಆಕೆ ಕರೆ ಸ್ವೀಕರಿಸಿಲ್ಲ. ಆತಂಕಗೊಂಡ ಆತ ಪೊಲೀಸರಿಗೆ ಕರೆ ಮಾಡಿದ್ದಾನೆ.ಪೊಲೀಸ್ ಸಿಬ್ಬಂದಿ ಆಕೆಯ ಮನೆ ತಲುಪಿ, ಎಷ್ಟು ಕರೆದರೂ ಉತ್ತರ ಬಂದಿಲ್ಲ. ಬಾಗಿಲು ಮುರಿದು ಒಳಹೊಕ್ಕಾಗ ಆಕೆ ಬಾತ್ರೂಂನ ಟಬ್ನಲ್ಲಿ ಪ್ರಜ್ಞೆ ತಪ್ಪಿದ್ದಳು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಸಿವಾಗಿದ್ದಕ್ಕೆ ಎಂಟು ದಿನದಿಂದ ಮೂರ್ಛೆ ಹೋಗಿದ್ದಾಳೆಂದು ವೈದ್ಯರು ತಿಳಿಸಿದ್ದಾರೆ.ನೀವೇನಾದರೂ ಆನ್ಲೈನ್ನಲ್ಲಿ ಫುಡ್ ಆರ್ಡರ್ ಮಾಡಿದರೆ ಮೊಬೈಲ್ ಪಕ್ಕದಲ್ಲೇ ಇರಲಿ. ಕರೆ ಸ್ವೀಕರಿಸಲು ಮರೆಯದಿರಿ.