ಸಿಡ್ನಿ: ನೀರಿನ ಬರ ಹಾಗೂ ಕಾಡ್ಗಿಚ್ಚಿನಿಂದ ಕಂಗೆಟ್ಟಿರುವ ಆಸ್ಟ್ರೇಲಿಯಾದಲ್ಲಿ ಶಾರ್ಪ್ ಶೂಟರ್ಸ್ ಗಳು ಐದು ದಿನಗಳಲ್ಲಿ ಐದು ಸಾವಿರ ಒಂಟೆಗಳನ್ನು ಕೊಂದಿದ್ದಾರೆ.
ದಕ್ಷಿಣ ಆಸ್ಟ್ರೇಲಿಯಾದಲ್ಲಿ ಒಂಟೆಗಳ ಹೆಚ್ಚಳ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಸರ್ಕಾರ ಐದು ದಿನಗಳಲ್ಲಿ ಹತ್ತು ಸಾವಿರ ಒಂಟೆಗಳನ್ನು ಕೊಲ್ಲಲು ಆದೇಶಿಸಿತ್ತು. ಇದಕ್ಕಾಗಿ ಶಾರ್ಪ್ ಶೂಟರ್ಸ್ ಗಳನ್ನು ನಿಯೋಜಿಸಿತ್ತು. ಶೂಟರ್ ಗಳಿಗೆ ಹೆಲಿಕಾಫ್ಟರ್ ಗಳನ್ನೂ ಒದಗಿಸಿತ್ತು. ಆದರೆ ಐದು ಸಾವಿರ ಒಂಟೆಗಳನ್ನಷ್ಟೇ ಕೊಲ್ಲುವಲ್ಲಿ ಶಾರ್ಪ್ ಶೂಟರ್ಸ್ ಗಳು ಯಶಸ್ವಿಯಾಗಿದ್ದಾರೆ.
ನೀರಿನ ಬರ ಹೆಚ್ಚಿದ್ದು, ಒಂಟೆಗಳು ಅಧಿಕ ನೀರು ಕುಡಿಯುತ್ತವೆಂಬ ಹಿನ್ನೆಲೆಯಲ್ಲಿ ಅವುಗಳ ಮಾರಣಹೋಮಕ್ಕೆ ಆಸ್ಟ್ರೇಲಿಯಾ ಸರ್ಕಾರ ಮುಂದಾಗಿದೆ.
ಈಗಾಗಲೇ ಇಡೀ ಆಸ್ಟ್ರೇಲಿಯಾದಲ್ಲಿ ವಾತಾವರಣ ತೀವ್ರ ಉಷ್ಣವಾಗಿದೆ. ದಕ್ಷಿಣ ಆಸ್ಟ್ರೇಲಿಯಾದ ಕೆಲ ಬುಡಕಟ್ಟು ಜನಾಂಗದವರು ಈ ಒಂಟೆಗಳ ಕಾರಣದಿಂದ ನೀರಿನ ಪ್ರಮಾಣ ತೀವ್ರ ಕಡಿಮೆಯಾಗುತ್ತದೆ. ಬರಗಾಲವೂ ಬರುತ್ತಿದೆ ಎಂದು ದೂರು ನೀಡಿದ್ದರು.
ಆಸ್ಟ್ರೇಲಿಯಾದಲ್ಲಿ 5 ಸಾವಿರ ಒಂಟೆಗಳ ಹತ್ಯೆ
Follow Us