ಮಕಾಸ್ಸರ್: ಇಂಡೋನೇಷ್ಯಾದಲ್ಲಿ ಪ್ರೇಮಿಗಳ ದಿನ ಆಚರಿಸುವಂತಿಲ್ಲ. ಯುವ ಜನತೆಗೆ ಸೆಕ್ಸ್ ಬಗ್ಗೆ ಆಸಕ್ತಿ ಮೂಡುತ್ತದೆ ಎನ್ನುವ ಕಾರಣಕ್ಕೆ ಅಲ್ಲಿನ ಸರ್ಕಾರ ಪ್ರೇಮಿಗಳ ದಿನ ಆಚರಿಸುವುದಕ್ಕೆ ಅನುಮತಿ ನೀಡಿಲ್ಲ.
ಮಕಸ್ಸರ್ನ ಮೇಯರ್ ಮಹಮ್ಮದ್ ಇಕ್ಬಾಲ್ ಸಮದ್ ಸುಹೇ, ಪ್ರೇಮಿಗಳ ದಿನಾಚರಣೆಯನ್ನು ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ. ಈ ಆದೇಶದ ಮೇರೆಗೆ ನಗರದ ಕೆಲವು ಹೋಟೆಲ್ಗಳ ಮೇಲೆ ದಾಳಿ ಮಾಡಲಾಗಿದ್ದು, ಹೋಟೆಲ್ ಒಂದರಲ್ಲಿ ಅನೈತಿಕ ಸಂಬಂಧ ಹೊಂದಿದ್ದ ಜೋಡಿಯೊಂದನ್ನು ಬಂಧಿಸಲಾಗಿದೆ.
ಯಾವುದೇ ವ್ಯಕ್ತಿ ಕಾಂಡೋಮ್ ಕೊಳ್ಳಬೇಕಾದರೆ ಆತ ವಿವಾಹಿತನೇ ಆಗಿರಬೇಕು ಮತ್ತು ಆತನ ಗುರುತಿನ ಚೀಟಿ ತೋರಿಸಿದ ಮೇಲೆ ಮಾತ್ರವೇ ಆತನಿಗೆ ಕಾಂಡೋಮ್ ನೀಡಬೇಕು ಎಂದು ಎಲ್ಲ ಅಂಗಡಿಗಳಿಗೆ ಸೂಚಿಸಲಾಗಿದೆ.
ಮುಸ್ಲಿಂ ಪ್ರಧಾನ ದೇಶಗಳಲ್ಲಿ ಸಾಮಾನ್ಯವಾಗಿ ಪ್ರೇಮಿಗಳ ದಿನಾಚರಣೆಗೆ ಹೆಚ್ಚಿನ ಬೆಂಬಲ ನೀಡುವುದಿಲ್ಲ. ಧರ್ಮಕ್ಕೆ ಕಳಂಕ ಉಂಟಾಗಬಹುದು ಎಂಬ ಕಾರಣಕ್ಕೆ ಅನುಮತಿ ನಿರಾಕರಿಸಲಾಗುತ್ತದೆ.
ಇಂಡೋನೇಷ್ಯಾದಲ್ಲಿಲ್ಲ ಪ್ರೇಮಿಗಳ ದಿನ ಆಚರಣೆ!
Follow Us