ಬಾಗ್ದಾದ್: ಇರಾಕ್ ದೇಶದಲ್ಲಿ ತನ್ನ ಅಸ್ತಿತ್ವ ಕಳೆದುಕೊಂಡಿದ್ದ ಇಸ್ಲಾಮಿಕ್ ಸ್ಟೇಟ್ (ಐಎಸ್ ) ಉಗ್ರ ಸಂಘಟನೆ ಮತ್ತೆ ತನ್ನ ಅಸ್ತಿತ್ವ ರೂಪಿಸುತ್ತಿದೆ ಎಂದು ಕುರ್ದಿಷ್ ಮತ್ತು ಪಾಶ್ಚಾತ್ಯ ಗುಪ್ತಚರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕುರಿತು ಬಿಬಿಸಿ ವಾಹಿನಿಗೆ ಮಾಹಿತಿ ನೀಡಿರುವ ಅವರು, ಈ ಉಗ್ರರು ಅತ್ಯಂತ ಕೌಶಲ್ಯಪೂರ್ಣರಾಗಿದ್ದು, ಅಲ್ –ಖೈದಾ ಸಂಘಟನೆಗಿಂತ ಅಪಾಯಕಾರಿಯಾಗಿದ್ದಾರೆ. ಅಲ್-ಖೈದಾ ಸಂಘಟನೆಯ ಮಾದರಿಯಲ್ಲೇ ತೀವ್ರಗಾಮಿಗಳೆಲ್ಲರೂ ಇರಾಕ್ ನ ಹಮ್ರಿನ್ ಬೆಟ್ಟಗುಡ್ಡಗಳನ್ನು ತಲೆಮರೆಸಿಕೊಂಡಿದ್ದಾರೆ ಎಂದಿದ್ದಾರೆ.