ವಾಷಿಂಗ್ಟನ್: ಮೈಸೂರಿನ ಕುವೆಂಪು ನಗರದ ಎಂಜಿನಿಯರಿಂಗ್ ವಿದ್ಯಾರ್ಥಿ ಅಭಿಷೇಕ್ ಭಟ್ ಹತ್ಯೆ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ. ಆರೋಪಿಯನ್ನು 42 ವರ್ಷದ ಎರಿಕ್ ಟರ್ನರ್ ಎಂದು ಗುರುತಿಸಲಾಗಿದೆ. ಒಂದುವರೆ ವರ್ಷದ ಹಿಂದೆ ಎಂಜಿನಿಯೆರಿಂಗ್ ಉನ್ನತ ಶಿಕ್ಷಣಕ್ಕೆ ಅಭಿಷೇಕ್ ಅಮೆರಿಕಕ್ಕೆ ತೆರಳಿದ್ದರು. ಕ್ಯಾಲಿಫೋರ್ನಿಯಾದ ಸ್ಯಾನ್ ಬರ್ನಾಡ್ ಡಿನೋ ಕಾಲೇಜಿನಲ್ಲಿ ಎಂಜಿನಿಯರಿಂಗ್ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದರು. ವಾರಾಂತ್ಯದಲ್ಲಿ ಅಭಿಷೇಕ್ ಹೊಟೇಲೊಂದರಲ್ಲಿ ಪಾರ್ಟ್ ಟೈಮ್ ಕೆಲಸ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಟರ್ನ್ ರ್ ಅಭಿಷೇಕ್ ಜತೆ ವಾಗ್ವಾದಕ್ಕಿಳಿದು ಬಳಿಕ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ. ಅಭಿಷೇಕ್ ತಂದೆ ಮೈಸೂರಿನಲ್ಲಿ ಯೋಗ ಶಿಕ್ಷಕರಾಗಿದ್ದಾರೆ