ಖಾರ್ಟೌಮ್: ಎಲ್ಪಿಜಿ ಟ್ಯಾಂಕರ್ ಸ್ಫೋಟಗೊಂಡು ಸುಡಾನ್ನಲ್ಲಿನ ಸೆರಾಮಿಕ್ ಕಾರ್ಖಾನೆಯಲ್ಲಿದ್ದ 20 ಭಾರತೀಯರು ಸೇರಿ ಒಟ್ಟು 25 ಮಂದಿ ಸಾವಿಗೀಡಾಗಿದ್ದಾರೆ. 130ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಖಾರ್ಟೌಮ್ನ ಬಹ್ರಿ ಏರಿಯಾದಲ್ಲಿರುವ ಸೀಲಾ ಸೆರಾಮಿಕ್ ಕಾರ್ಖಾನೆಯಲ್ಲಿ ಈ ದುರಂತ ಸಂಭವಿಸಿದ್ದು, 16 ಭಾರತೀಯರು ಘಟನೆಯ ಬಳಿಕ ನಾಪತ್ತೆಯಾಗಿರುವುದಾಗಿ ಸುಡಾನ್ನಲ್ಲಿನ ಭಾರತೀಯ ರಾಯಭಾರಿ ಕಚೇರಿ ಬುಧವಾರ ಮಾಹಿತಿ ನೀಡಿದೆ.