ನವದೆಹಲಿ: ಏಕಾಏಕಿ ವಿಮಾನ 500 ಅಡಿ ಎತ್ತರಕ್ಕೆ ಹಾರಿದ್ದರಿಂದ ಆಯತಪ್ಪಿದ ಗಗನಸಖಿಯೊಬ್ಬರು ಕೆಳಬಿದ್ದ ಪರಿಣಾಮ ಆಕೆಯ ಕಾಲಿನ ಏಳು ಕಡೆ ಮೂಳೆ ಮುರಿತ ಉಂಟಾಗಿದೆ.
ಕ್ಯೂಬಾದಿಂದ ಮ್ಯಚೆಸ್ಟರ್ ಗೆ ಹಾರಾಟ ನಡೆಸುತ್ತಿದ್ದ ವಿಮಾನ ಬಿರುಗಾಳಿಗೆ ಸಿಲುಕಿ ಏಕಾಏಕಿ 500 ಅಡಿ ಮೇಲೆಕ್ಕೇರಿತ್ತು. ಇದರಿಂದ ಗಗನಸಖಿ ಈಡನ್ ಗ್ಯಾರಿಟ್ಟಿ ಆಯತಪ್ಪಿ ಕೆಳಬಿದ್ದಿದ್ದಳು. ದುರದೃಷ್ಟವೆಂದರೆ ನೋವಿನಿಂದ ಬಳಲುತ್ತಿದ್ದ ಆಕೆಗೆ ಚಿಕಿತ್ಸೆ ಒದಗಿಸಲು ಸಾಧ್ಯವಾಗಿದ್ದು, ಏಳು ಗಂಟೆಯ ನಂತರ ವಿಮಾನ ಭೂಸ್ಪರ್ಶ ಮಾಡಿದಾಗಲೇ.