Friday, January 15, 2021

‘ಐಸ್ ಬಕೆಟ್ ಚಾಲೆಂಜ್’ ರೂವಾರಿ ಪೀಟ್ ಫ್ರೇಟ್ಸ್ ಇನ್ನಿಲ್ಲ

ನ್ಯೂಯಾರ್ಕ್: ಐಸ್ ಬಕೆಟ್ ಚಾಲೆಂಜ್ ಸ್ಪೂರ್ತಿಯಾಗಿದ್ದ ಅಮೆರಿಕದ ಮಾಜಿ ಬೇಸ್ ಬಾಲ್ ಆಟಗಾರ ಪೀಟ್ ಫ್ರೇಟ್ಸ್ (34) ಇನ್ನಿಲ್ಲ.
ಜಗತ್ತಿನಾದ್ಯಂತ ಐಸ್ ಬಕೆಟ್ ಚಾಲೆಂಜ್ ಮೂಲಕ ದೇಣಿಗೆ ಸಂಗ್ರಹಿಸಲು ಸ್ಫೂರ್ತಿಯಾಗಿದ್ದ ಪೀಟ್ ಫ್ರೇಟ್ಸ್ ಸೋಮವಾರ ನಿಧನರಾಗಿದ್ದಾರೆಂದು ನ್ಯೂಯಾರ್ಕ್ ಟೈಮ್ಸ್ ವರದಿ ತಿಳಿಸಿದೆ.
ಪೀಟ್ ಮಾರಣಾಂತಿಕ ಲಾ ಗೆರಿಗ್ಸ್ ಎಂಬ ನರಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ 2014ರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಜನಪ್ರಿಯವಾಗಿದ್ದ ಐಸ್ ಬಕೆಟ್ ಚಾಲೆಂಜ್ ಗೆ ಸ್ಪೂರ್ತಿಯಾಗಿದ್ದರು. ಲಾ ಗೆರಿಗ್ಸ್(ಎಎಲ್ ಎಸ್) ನರಸಂಬಂಧಿ ಕಾಯಿಲೆ ಕುರಿತ ವೈದ್ಯಕೀಯ ಸಂಶೋಧನೆಗಾಗಿ ಹಾಗೂ ರೋಗದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ದೇಣಿಗೆ ಸಂಗ್ರಹಿಸುವ ಉದ್ದೇಶದಿಂದ ಪೀಟ್ ಐಸ್ ಬಕೆಟ್ ಚಾಲೆಂಜ್ ಅನ್ನು ಹುಟ್ಟುಹಾಕಿದ್ದರು.

ಟೋಮ್ ಕ್ರೂಸ್, ಸ್ಟೀವನ್ ಸ್ಪೈಲ್ ಬರ್ಗ್, ಬಿಲ್ ಗೇಟ್ಸ್, ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಸೇರಿ ಜಗತ್ತಿನ ದಿಗ್ಗಜರೆಲ್ಲ ಐಸ್ ಬಕೆಟ್ ಚಾಲೆಂಜ್ ನಲ್ಲಿ ಪಾಲ್ಗೊಂಡಿದ್ದರು.

ಮತ್ತಷ್ಟು ಸುದ್ದಿಗಳು

Latest News

ರಾಜ್ಯದಲ್ಲಿ 708 ಮಂದಿಗೆ ಕೊರೋನಾ ಸೋಂಕು, ಮೂವರ ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 708 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 9,30,668ಕ್ಕೆ ಏರಿದೆ.ರಾಜ್ಯ ಆರೋಗ್ಯ...

ಹಿರಿಯ ಪತ್ರಕರ್ತ ಹನುಮಂತ ಹೂಗಾರ ನಿಧನ

newsics.com ಹುಬ್ಬಳ್ಳಿ: 2020ನೇ ಸಾಲಿನ 'ಜೀವಮಾನ ಸಾಧನೆ' ಪ್ರಶಸ್ತಿ ವಿಜೇತ, ಹಿರಿಯ ಪತ್ರಕರ್ತ ಹನುಮಂತ ಭೀಮಪ್ಪ ಹೂಗಾರ (74)ಇಂದು ಮಧ್ಯಾಹ್ನ ನಿಧನರಾದರು. ಕಳೆದ ನಾಲ್ಕು ದಶಕಗಳಿಂದ ಹೆಚ್ಚು ಕಾಲ ನೇತಾಜಿ, ವಿಶಾಲ ಕರ್ನಾಟಕ, ಪ್ರವರ್ತಕ, ಕುಟುಂಬ...

ಧಾರವಾಡ ಅಪಘಾತ: ಮೃತ ಯುವತಿಯರ ಶವ ಅದಲು-ಬದಲು

newsics.com ಧಾರವಾಡ: ಇಂದು(ಜ.15) ಧಾರವಾಡದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟವರ ಶವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವಾಗ ಜಿಲ್ಲಾಸ್ಪತ್ರೆಯಲ್ಲಿ ಅದಲುಬದಲು ಶವ ನೀಡಿದ ಘಟನೆ ನಡೆದಿದೆ. ಧಾರವಾಡದ ಇಟ್ಟಿಗಟ್ಟಿ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟ 11 ಜನರಲ್ಲಿ ಅಸ್ಮಿತಾ,...
- Advertisement -
error: Content is protected !!