
ಅಮೆರಿಕ: ತಂದೆಯ ಕಾಯಿಲೆಯಿಂದ ಪದೇ ಪದೆ ವಿವಾಹ ಮುಂದೂಡುತ್ತಿದ್ದರಿಂದ ಬೇಸತ್ತ ವಧು ವರರು, ಆಸ್ಪತ್ರೆಯಲ್ಲೇ ವಿವಾಹವಾಗಿದ್ದಾರೆ
ಹೌದು. ಈ ಜೋಡಿಗೆ ನಿಶ್ಚಿತಾರ್ಥವಾಗಿ ಸೆಪ್ಟೆಂಬರ್ 21 ಕ್ಕೆ ವಿವಾಹ ನಿಗದಿಯಾಗಿತ್ತು. ಆದರೆ ಮದುವೆಯ ಹಿಂದಿನ ದಿನ ವರನ ತಂದೆ ಡಯಾಬಿಟಿಸ್ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದರು. ಈ ಹಿನ್ನಲೆಯಲ್ಲಿ ಅವರ ಮದುವೆಯನ್ನು ಮುಂದೂಡಲಾಗಿತ್ತು.ಹೀಗೆ ಮೂರು ಬಾರಿ ಅವರ ಮದುವೆ ಮುಂದಕ್ಕೆ ಹೋಗಿದೆ.
ಇದರಿಂದ ಬೇಸತ್ತ ಗಂಡು ಹೆಣ್ಣು, ತಂದೆ ದಾಖಲಾದ ಆಸ್ಪತ್ರೆಯಲ್ಲಿ ತಂದೆಯ ಸಮ್ಮಖದಲ್ಲಿಯೇ ವಿವಾಹವಾಗಿದ್ದಾರೆ. ಇವರಿಗೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ಶುಭ ಹಾರೈಸಿದ್ದಾರೆ.