ಕೌಲಾ ಲಾಂಪುರ: ಮಾರಣಾಂತಿಕ ಕೊರೋನಾ ವೈರಾಣು ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಚೀನಾ ಹಾಗೂ ಹಾಂಗ್ ಕಾಂಗ್ ನ ಪುರುಷರು ಮತ್ತು ಮಹಿಳೆಯರ ಬ್ಯಾಡ್ಮಿಂಟನ್ ತಂಡಗಳು ಇಂದು ಫಿಲಿಪೈನ್ಸ್ ನ ಮನಿಲಾದಲ್ಲಿ ಆರಂಭವಾಗಲಿರುವ ಏಷಿಯಾ ಚಾಂಪಿಯನ್ ಶಿಪ್ ಪಂದ್ಯಾವಳಿಯಿಂದ ಹೊರಗುಳಿಯುವಂತಾಗಿದೆ.
ಚೀನಾ ಮತ್ತು ಹಾಂಗ್ ಕಾಂಗ್ ನಿಂದ ಆಗಮಿಸುವ ಪ್ರತಿ ವ್ಯಕ್ತಿಯನ್ನು 14 ದಿನಗಳ ತಪಾಸಣೆಗೊಳಪಡಿಸಬೇಕು ಎಂಬ ನಿಯಮದ ಹಿನ್ನೆಲೆಯಲ್ಲಿ ಅಲ್ಲಿನ ತಂಡಗಳನ್ನು ಸ್ಪರ್ಧೆಯಲ್ಲಿ ಸೇರಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಬ್ಯಾಡ್ಮಿಂಟನ್ ಸಂಘಟನೆ ಹೇಳಿಕೆ ನೀಡಿದೆ.