ಬೀಜಿಂಗ್: ಇಲ್ಲಿನ ಕಲ್ಲಿದ್ದಲು ಗಣಿಯಲ್ಲಿ ಗ್ಯಾಸ್ ಸ್ಫೋಟಗೊಂಡು 14 ಗಣಿ ಕೆಲಸಗಾರರು ಸಾವನ್ನಪ್ಪಿದ್ದಾರೆ.
ಚೀನಾದ ನೈಋತ್ಯ ಭಾಗದ ಅನ್ಲಾಂಗ್ ಪ್ರದೇಶದಲ್ಲಿರುವ ಗುವಾಂಗ್ಲಾಂಗ್ ಕಲ್ಲಿದ್ದಲು ಗಣಿಯಲ್ಲಿ ಸೋಮವಾರ ತಡರಾತ್ರಿ 1.30ರ ಸಮಯದಲ್ಲಿ ಈ ದುರಂತ ನಡೆದಿದೆ. ಇನ್ನೂ ಇಬ್ಬರು ಗಣಿಯಡಿಯಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ. ದುರ್ಘಟನೆ ವೇಳೆ ಸುಮಾರು 23 ಕಾರ್ಮಿಕರು ನೆಲದಾಳದಲ್ಲಿ ಕೆಲಸ ಮಾಡುತ್ತಿದ್ದರು. ಗ್ಯಾಸ್ ಸ್ಫೋಟಿಸಿದ ಪರಿಣಾಮ 14 ಮಂದಿ ಅಲ್ಲಿಯೇ ಮೃತಪಟ್ಟಿದ್ದಾರೆ. ಏಳು ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಕಲ್ಲಿದ್ದಲು ಉತ್ಪಾದನೆಯಲ್ಲಿ ಜಗತ್ತಿನಲ್ಲಿ ಚೀನಾ ಎರಡನೇ ಸ್ಥಾನದಲ್ಲಿದ್ದು, ಇಲ್ಲಿನ ಗಣಿಪ್ರದೇಶಗಳಲ್ಲಿ ಸ್ಫೋಟ, ಕಾರ್ಮಿಕರ ಸಾವು ನೋವು ಸಾಮಾನ್ಯ. ತಿಂಗಳ ಹಿಂದಷ್ಟೇ ಉತ್ತರ ಚೀನಾದ ಶಾಂಕ್ಷಿ ವಲಯದಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ ಗ್ಯಾಸ್ ಸ್ಫೋಟ ಆಗಿ 15 ಮಂದಿ ಸಾವನ್ನಪ್ಪಿದ್ದರು.