ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮತ್ತೆ ಟ್ರೋಲ್ ಗೆ ಗುರಿಯಾಗಿದ್ದಾರೆ. ಈ ಬಾರಿ ಸಸ್ಯಗಳ ಕುರಿತಂತೆ ಇಮ್ರಾನ್ ಖಾನ್ ಮಾತು ಇದಕ್ಕೆ ಕಾರಣ. ಪಾಕ್ ಪತ್ರಕರ್ತರಾದ ನೈಲಾ ಇನ್ಸಾತ್ ಇಮ್ರಾನ್ ಖಾನ್ ವೀಡಿಯೋ ಶೇರ್ ಮಾಡಿದ್ದಾರೆ. ಸಮಾರಂಭದಲ್ಲಿ ಮಾತನಾಡಿದ ಖಾನ್, ಶೇಕಡ 75ರಷ್ಟಿದ್ದ ಅರಣ್ಯ ಕಳೆದ ಹತ್ತು ವರ್ಷಗಳಲ್ಲಿ ಭಾರೀ ಪ್ರಮಾಣದಲ್ಲಿ ನಾಶವಾಗಿದೆ. ಮರಗಳು ರಾತ್ರಿ ಇಂಗಾಲವನ್ನು ಹೀರಿ ಆಮ್ಲಜನಕವನ್ನು ಬಿಡುಗಡೆ ಮಾಡುತ್ತಿವೆ ಎಂದಿದ್ದಾರೆ. ಇದು ತಪ್ಪಾದ ಹೇಳಿಕೆಯಾಗಿದೆ. ಸೂರ್ಯನ ಕಿರಣಗಳ ಶಕ್ತಿಯಿಂದ ನೆರವಿನಿಂದ ಮರಗಳು ಹಗಲಿನಲ್ಲಿ ಇಂಗಾಲವನ್ನು ಹೀರಿ ಆಮ್ಲಜನಕ ಬಿಡುಗಡೆ ಮಾಡುತ್ತಿವೆ. ಪ್ರಾಥಮಿಕ ಶಾಲೆಯಲ್ಲಿ ಎಲ್ಲ ಮಕ್ಕಳಿಗೆ ಇದನ್ನು ಹೇಳಿಕೊಡಲಾಗುತ್ತಿದೆ. ಪಾಪ ಇದು ಪಾಕ ಪ್ರಧಾನಿಗೆ ತಿಳಿದಿಲ್ಲ ಎಂದ ನೆಟ್ಟಿಗರು ಕಾಲೆಳೆದಿದ್ದಾರೆ.