ಮೆಕ್ಸಿಕೋ: ಸೋಮವಾರ ಸಂಜೆ ಕಾಣೆಯಾಗಿದ್ದ ಚಿಲಿ ವಾಯುಪಡೆಗೆ ಸೇರಿದ ಸಿ130 ಹರ್ಕ್ಯುಲಸ್ ಯುದ್ಧ ವಿಮಾನ ಪತನಗೊಂಡಿದೆ.
ಶೋಧ ಕಾರ್ಯಾಚರಣೆಯ ವೇಳೆ ಅದು ಪತನಗೊಂಡಿರುವುದು ಬೆಳಕಿಗೆ ಬಂದಿದ್ದು, ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ ಎಂದು ಚಿಲಿಯ ವಾಯುಪಡೆ ತಿಳಿಸಿದೆ.
ಸಿ 130 ಹರ್ಕ್ಯುಲಸ್ ವಿಮಾನ ಸಂಪರ್ಕ ಕಳೆದುಕೊಂಡ 7 ಗಂಟೆಗಳ ಬಳಿಕ ಅದು ಅಪಘಾತಕ್ಕೀಡಾಗಿದೆ ಎಂದು ತಿಳಿದಿದೆ ಎಂದು ಚಿಲಿಯ ರಕ್ಷಣಾ ಪಡೆಗಳು ವರದಿ ಮಾಡಿವೆ ಎಂದು ಚಿಲಿ ಮಾಧ್ಯಮಗಳು ವರದಿ ಮಾಡಿವೆ. 38 ಜನರನ್ನೊಳಗೊಂಡ ಮಿಲಿಟರಿ ವಿಮಾನ ಅಂಟಾರ್ಕ್ಟಿಕಾ ಮಾರ್ಗದಲ್ಲಿ ಪತನವಾಗಿದೆ. ಈ ಫ್ಲೈಟ್ನಲ್ಲಿ ಮೂವರು ನಾಗರಿಕರು ಸೇರಿ 21 ಜನ ಮಿಲಿಟರಿ ಸಿಬ್ಬಂದಿ 17 ಮಂದಿ ವಿಮಾನ ಸಿಬ್ಬಂದಿಯಿದ್ದು, ಇವರು ಬದುಕಿರುವ ಸಾಧ್ಯತೆ ಕಡಿಮೆ ಎಂದು ಚಿಲಿ ಸೇನಾಪಡೆ ತಿಳಿಸಿದೆ.