- 38 ಜನರಿದ್ದ ಮಿಲಿಟರಿ ವಿಮಾನ ಕಣ್ಮರೆ
ಸ್ಯಾಂಟಿಯಾಗೋ: ಚಿಲಿ ದೇಶದ ವಾಯುಪಡೆಗೆ ಸೇರಿದ ಮಿಲಿಟರಿ ವಿಮಾನವೊಂದು ನಾಪತ್ತೆಯಾಗಿದೆ.
ವಿಮಾನವನ್ನು ಪತ್ತೆ ಮಾಡುವ ಪ್ರಯತ್ನದಲ್ಲಿದ್ದೇವೆ ಎಂದು ಚಿಲಿ ಸೇನಾಪಡೆ ತಿಳಿಸಿದೆ. ಸಿ-130 ಹರ್ಕ್ಯುಲಸ್ ವಿಮಾನ ಪಂಟಾ ಅರೆನಾಸ್ ನಿಂದ ಸೋಮವಾರ ಸಂಜೆ 4.55ಕ್ಕೆ ಟೇಕ್ ಆಫ್ ಆಗಿತ್ತು. 38 ಜನರನ್ನೊಳಗೊಂಡ ಮಿಲಿಟರಿ ವಿಮಾನ ಅಂಟಾರ್ಕ್ಟಿಕಾ ಮಾರ್ಗದಲ್ಲಿ ನಾಪತ್ತೆಯಾಗಿದೆ. ಈ ಫ್ಲೈಟ್ನಲ್ಲಿ ಮೂವರು ನಾಗರಿಕರು ಸೇರಿ 21 ಜನ ಮಿಲಿಟರಿ ಸಿಬ್ಬಂದಿ 17 ಮಂದಿ ವಿಮಾನ ಸಿಬ್ಬಂದಿ ಇದ್ದಾರೆ ಎಂದು ಚಿಲಿ ಸೇನಾಪಡೆ ತಿಳಿಸಿದೆ.
ಸುಮಾರು 3,000 ಕಿಮೀ ದೂರ ಪ್ರಯಾಣಿಸಿದ ಬಳಿಕ ಅಂದರೆ ಸಂಜೆ 6.13 ರವೇಳೆಗೆ ಇದು ರೇಡಿಯೋ ಸಂಪರ್ಕ ಕಳೆದುಕೊಂಡಿದೆ ಎಂದು ಚಿಲಿ ಏರ್ಫೋರ್ಸ್ ಮಾಹಿತಿ ನೀಡಿದೆ.