ಇಸ್ಲಾಮಾಬಾದ್: ಮಾರಕ ಕೊರೋನಾ ವೈರಸ್ ಹೆಚ್ಚು ಬಲಿಪಡೆದಿರುವ ಚೀನಾದ ವುಹಾನ್ ಪ್ರದೇಶದಿಂದ ಪಾಕಿಸ್ತಾನದ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆ ತರಬೇಕೆಂಬ ಬೇಡಿಕೆ ತೀವ್ರಗೊಂಡಿದೆ. ಇಸ್ಲಾಮಾಬಾದ್ ನಲ್ಲಿ ವಿದ್ಯಾರ್ಥಿಗಳ ಪೊಷಕರು ಈ ಸಂಬಂಧ ಪ್ರತಿಭಟನೆ ನಡೆಸಿದರು. ನಮ್ಮ ಮಕ್ಕಳನ್ನು ಪಾಕಿಸ್ತಾನ ಸರ್ಕಾರ ನಿರ್ಲಕ್ಷಿಸಿದೆ ಎಂದು ಅವರು ಆರೋಪಿಸಿದರು. ಭಾರತ ತನ್ನ ನಾಗರಿಕರನ್ನು ಸ್ವದೇಶಕ್ಕೆ ಕರೆ ತಂದ ಬಳಿಕ ಪಾಕಿಸ್ತಾನದಲ್ಲಿ ಪ್ರತಿಭಟನೆ ತೀವ್ರಗೊಂಡಿದೆ.