ವಾಷಿಂಗ್ಟನ್: ಹೊಸ ವರ್ಷ ಆರಂಭವಾಯಿತು ಎಂದರೆ ಎಲ್ಲರೂ ಸಂತೋಷ ಪಡುತ್ತಾರೆ. ಹಳೆಯದನ್ನೆಲ ಮರೆತು ಹೊಸ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಾರೆ. ಅದರಲ್ಲೂ ಜನವರಿ ತಿಂಗಳನ್ನು ಹಾರ್ದಿಕವಾಗಿ ಸ್ವಾಗತಿಸುತ್ತಾರೆ. ಪರಸ್ಪರ ಶುಭಾಶಯ ಹೇಳುತ್ತಾರೆ. ಆದರೆ ಅಮೆರಿಕದಲ್ಲಿ ಇದು ಅಪಖ್ಯಾತಿಗೆ ಒಳಗಾಗಿದೆ. ಅತೀ ಹೆಚ್ಚು ಡೈವೋರ್ಸ್ ಅರ್ಜಿ ಸಲ್ಲಿಕೆ ಇದೇ ತಿಂಗಳಲ್ಲಿ ದಾಖಲಾಗುತ್ತಿದೆಯಂತೆ. ಹೊಸ ವರ್ಷದಲ್ಲಿ ಹೊಸ ಬದುಕಿಗೆ ಹಂಬಲಿಸುವ ಹಲವು ಮಂದಿ ಇನ್ನು ಜೀವನದಲ್ಲಿ ಹೊಂದಾಣಿಕೆ ಬೇಡ ಎಂಬ ತೀರ್ಮಾನಕ್ಕೆ ಬರುತ್ತಾರಂತೆ. ಇದರಿಂದ ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚು ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ. ವಾಷಿಂಗ್ಟನ್ ವಿಶ್ವ ವಿದ್ಯಾನಿಲಯ ಈ ಸಂಬಂಧ ಸಂಶೋಧನೆ ಕೂಡ ನಡೆಸಿದೆ.