* ಡೋಪಿಂಗ್ ಡೇಟಾ ನಾಶ ಹಿನ್ನೆಲೆ
* ಮುಂದಿನ 4 ವರ್ಷ ಜಾಗತಿಕ ಕ್ರೀಡಾಕೂಟಗಳಿಂದ ಕೊಕ್
ಮಾಸ್ಕೋ: ಡೋಪಿಂಗ್ ಡೇಟಾ ನಾಶಪಡಿಸಿದ ಹಿನ್ನೆಲೆಯಲ್ಲಿ ಜಾಗತಿಕ ಕ್ರೀಡಾಕೂಟಗಳಿಂದ ರಷ್ಯಾ ನಿಷೇಧಕ್ಕೊಳಗಾಗಿದೆ.ಮುಂದಿನ ನಾಲ್ಕು ವರ್ಷ ಈ ನಿಷೇಧ ಜಾರಿಯಲ್ಲಿರುತ್ತದೆ ಎಂದು ವರ್ಲ್ಡ್ ಆ್ಯಂಟಿ ಡೋಪಿಂಗ್ ಏಜೆನ್ಸಿ (WADA) ಸ್ಪಷ್ಟಪಡಿಸಿದೆ.ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಸೇರಿ ಯಾವುದೇ ಜಾಗತಿಕ ಕ್ರೀಡಾಕೂಟಗಳಲ್ಲಿ ರಷ್ಯಾ ಪಾಲ್ಗೊಳ್ಳುವಂತಿಲ್ಲ. WADA ನಿರ್ಧಾರದಿಂದ ರಷ್ಯಾ ಜಾಗತಿಕವಾಗಿ ತೀರಾ ಮುಖಭಂಗ ಅನುಭವಿಸುವಂತಾಗಿದೆ.ವಾಡಾ ಕ್ರಮದಿಂದಾಗಿ 2020ರ ಟೋಕಿಯೊ ಒಲಿಂಪಿಕ್ಸ್, 2022 ರಲ್ಲಿ ಬೀಜಿಂಗ್ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್, ಮತ್ತು ನಡೆಯಲಿರುವ ಸಾಕರ್ ಕ್ರೀಡಾಕೂಟದಿಂದ ರಷ್ಯಾ ಹೊರಗುಳಿಯುವಂತಾಗಿದೆ.ರಷ್ಯಾದ ಕ್ರೀಡಾಪಟುಗಳು ಸಾಮೂಹಿಕವಾಗಿ ನಿಷೇಧಿತ ಡ್ರಗ್ಸ್ ಸೇವಿಸಿರುವುದನ್ನು ವಾಡಾ 2015ರಲ್ಲಿ ಪತ್ತೆಹಚ್ಚಿತ್ತು.