ಟೆಹ್ರಾನ್: ಇರಾನಿಯನ್ ವಿಮಾನವೊಂದು ಏರ್‌ಪೋರ್ಟ್‌ನಲ್ಲಿ ಲ್ಯಾಂಡ್ ಆಗುವ ಬದಲು ರಸ್ತೆಗಿಳಿದು ಆತಂಕ ಸೃಷ್ಟಿಸಿದ ಘಟನೆ ಟೆಹ್ರಾನ್‌ನಲ್ಲಿ ನಡೆದಿದೆ.
ಟೆಹ್ರಾನ್‌ನಲ್ಲಿರುವ ಮಹಾಶಹರ್ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಲ್ಯಾಂಡಿಂಗ್ ಗೇರ್‌ನಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಆಯತಪ್ಪಿ ರನ್‌ವೇನಿಂದ ನೇರವಾಗಿ ರಸ್ತೆಗೆ ಇಳಿದಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.
150 ಮಂದಿಯನ್ನು ಹೊತ್ತು ಸಾಗುತ್ತಿದ್ದ ಈ ವಿಮಾನ ರಸ್ತೆಗಿಳಿದರೂ ಯಾರಿಗೂ ಯಾವುದೇ ರೀತಿಯ ತೊಂದರೆಯಾಗಿಲ್ಲ ಎಂದು ಏರ್‌ಪೋರ್ಟ್ ನಿರ್ದೇಶಕ ಮೊಹಮ್ಮದ್ ರೇಜಾ ತಿಳಿಸಿದ್ದಾರೆ.
ಟೆಹ್ರಾನ್ ನಲ್ಲಿ ರಸ್ತೆಗಿಳಿದ ಇರಾನಿಯನ್ ವಿಮಾನ!
Follow Us