Sunday, May 16, 2021

ಟೇಬಲ್ ಟೆನಿಸ್‌; ಎರಡು ಚಿನ್ನ, ಒಂದು ಬೆಳ್ಳಿ ಸೇರ್ಪಡೆ

ಕಠ್ಮಂಡು; ನೇಪಾಳದ ಕಠ್ಮಂಡುವಿನಲ್ಲಿ ನಡೆಯುತ್ತಿರುವ ದಕ್ಷಿಣ ಏಷ್ಯನ್ ಕ್ರೀಡಾಕೂಟದ ಟೇಬಲ್ ಟೆನಿಸ್ ವಿಭಾಗದ ಮೂರು ಡಬಲ್ಸ್ ಸ್ಪರ್ಧೆಯಲ್ಲಿ ಭಾರತ ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದೆ.

 ಮಂಗಳವಾರ ಮೂರು ಚಿನ್ನ ಗೆದ್ದಿದ್ದ ಭಾರತ, ಬುಧವಾರ ಒಟ್ಟಾರೆ ಐದು ಸ್ವರ್ಣ ಪದಕ  ಹಾಗೂ ಮೂರು ಬೆಳ್ಳಿ ಸೇರಿದಂತೆ ಒಟ್ಟು ಒಂಬತ್ತು ಪದಕ ಪಡೆದುಕೊಂಡಿದೆ.

ಪುರುಷರ ಡಬಲ್ಸ್‌ ವಿಭಾಗದಲ್ಲಿ ಹರ್ಮೀತ್ ದೇಸಾಯಿ ಮತ್ತು ಆ್ಯಂಥೋನಿ ಅಮಲ್‌ರಾಜ್ ಜೋಡಿ 8-11, 11-7, 11-7, 11-5, 8-11. 12-10 ಅಂತರದಲ್ಲಿ ಸನಿಲ್ ಶೆಟ್ಟಿ ಮತ್ತು ಸುಧಾಂಶು ಗ್ರೋವರ್ ಜೋಡಿಯನ್ನು ಮಣಿಸಿ ಚಿನ್ನ ಪದಕ ತನ್ನದಾಗಿಸಿಕೊಂಡಿತು. ಮಹಿಳೆಯರ ಡಬಲ್ಸ್ ವಿಭಾಗದಲ್ಲಿ  ಮಾಧುರಿಕಾ ಪಟ್ಕರ್ ಮತ್ತು ಶ್ರೀಜಾ ಅಕುಲಾ ಜೋಡಿ 2-11, 11-8, 11-8, 11-6, 5-11, 11-5 ಅಂತರದಲ್ಲಿ ಸುತೀರ್ಥ ಮುಖರ್ಜಿ ಮತ್ತು ಅಯಿಕಾ ಮುಖರ್ಜಿ ವಿರುದ್ಧ ಗೆಲುವು ಪಡೆದು ಸ್ವರ್ಣ ಪದಕ ಪಡೆದುಕೊಂಡಿತು.

ಮತ್ತಷ್ಟು ಸುದ್ದಿಗಳು

Latest News

ಏನಿದು ಲಸಿಕೆ ಪಾಸ್‌ಪೋರ್ಟ್‌?

newsics.com ನವದೆಹಲಿ: ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಕೋವಿಡ್ ವಿರುದ್ಧದ ಲಸಿಕೆ ಅಭಿಯಾನ ನಡೆಯುತ್ತಿರುವ ವೇಳೆಯಲ್ಲೇ 'ಲಸಿಕೆ ಪಾಸ್‌ಪೋರ್ಟ್‌' ಸದ್ದು ಮಾಡುತ್ತಿದೆ. ಇದೀಗ ಜಾಗತಿಕ ಮಟ್ಟದಲ್ಲಿ...

ಫೇಸ್’ಬುಕ್’ನಲ್ಲಿ ಉಗ್ರ ಸಿದ್ಧಾಂತದ ಫೋಸ್ಟ್: ತಮಿಳುನಾಡಿನ 4 ಕಡೆ ಎನ್ಐಎ ಶೋಧ

newsics.com ಚೆನ್ನೈ: ಉಗ್ರ ಸಂಘಟನೆಗಳ ಸಿದ್ಧಾಂತ ಪ್ರತಪಾದಿಸುವ ಪೋಸ್ಟ್'ಗಳನ್ನು ಫೇಸ್'ಬುಕ್'ನಲ್ಲಿ ಹಂಚಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಭಾನುವಾರ ತಮಿಳುನಾಡಿನ ಮಧುರೈ ಜಿಲ್ಲೆಯ ನಾಲ್ಕು ಸ್ಥಳಗಳಲ್ಲಿ ಶೋಧ ನಡೆಸಿದೆ. ಮಧುರೈ ಜಿಲ್ಲೆಯ ಕಾಜಿಮಾರ್...

ಚೀನಾದಿಂದ ದೆಹಲಿಗೆ ಬಂತು 100 ಟನ್ ಆಕ್ಸಿಜನ್

newsics.com ನವದೆಹಲಿ: ಭಾರತದ ಕೊರೋನಾ ವಿರುದ್ಧದ ಹೋರಾಟಕ್ಕೆ 40ಕ್ಕೂ ಹೆಚ್ಚು ರಾಷ್ಟ್ರಗಳು ನೆರವು ನೀಡಿದ್ದು, ಇದೀಗ ಚೀನಾ ಕೂಡ ಗರಿಷ್ಠ ಪ್ರಮಾಣದಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ಸ್ ಪೂರೈಕೆ ಮಾಡಿದೆ. 3,600 ಆಕ್ಸಿಜನ್ ಕಾನ್ಸಂಟ್ರೇಟರ್ಸ್ ಭಾರತಕ್ಕೆ ಪೂರೈಕೆ ಮಾಡಿದೆ....
- Advertisement -
error: Content is protected !!