ವಾಷಿಂಗ್ಟನ್: ಅಧಿಕಾರ ದುರ್ಬಳಕೆ ಆರೋಪ ಹೊತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಮಹಾಭಿಯೋಗದ ಕರಡು ಸಿದ್ಧಪಡಿಸುವಂತೆ ಸೂಚಿಸಲಾಗಿದೆ.
ಹೌಸ್ ಆಫ್ ರೆಪ್ರಿಸೆಂಟಟಿವ್ಸ್ನ (ಅಮೆರಿಕ ಸಂಸತ್ನ ಕೆಳಮನೆ) ಸ್ಪೀಕರ್ ನಾನ್ಸಿ ಪೆಲೋಸಿ ಸದನದ ನ್ಯಾಯಾಂಗ ಸಮಿತಿಗೆ ಈ ಸೂಚನೆ ನೀಡಿದ್ದಾರೆ.
ಈ ಅಗ್ನಿಪರೀಕ್ಷೆಯಲ್ಲಿ ಜಯ ಸಾಧಿಸುವುದಾಗಿ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.
ಡೆಮಾಕ್ರಟಿಕ್ ಪಕ್ಷದ ನಾಯಕ ಜೋ ಬಿಡೆನ್ ಉಕ್ರೇನ್ನಲ್ಲಿ ವಾಣಿಜ್ಯೋದ್ದಮ ಹೊಂದಿದ್ದು, ಅದರ ವಿರುದ್ಧ ತನಿಖೆ ನಡೆಸುವಂತೆ ಉಕ್ರೇನ್ ಅಧ್ಯಕ್ಷರ ಮೇಲೆ ಒತ್ತಡ ತಂದಿದ್ದರು ಎಂಬ ಆಪಾದನೆ ಟ್ರಂಪ್ ಮೇಲಿದೆ.
ಟ್ರಂಪ್ ವಿರುದ್ಧ ಮಹಾಭಿಯೋಗಕ್ಕೆ ಸಿದ್ಧತೆ
Follow Us