ಮಾಸ್ಕೊ: ಬೆಕ್ಕೆ ಬೆಕ್ಕೆ ಮುದ್ದಿನ ಸೊಕ್ಕೆ… ಎಂಬ ಹಾಡನ್ನು ನಾವು ಕೇಳಿದ್ದೇವೆ. ಅಂತಹುದೇ ಸೊಕ್ಕಿದ ಮುದ್ದಿನ ಬೆಕ್ಕೊಂದು ತೊಟ್ಟಿಲಲ್ಲಿ ಮಲಗಿದ್ದ ಮಗುವನ್ನೇ ಉಸಿರುಗಟ್ಟಿಸಿ ಸಾಯಿಸಿದೆ.
ಉಕ್ರೇನ್ ನ ಕೀವ್ ನಗರ ಹೊರವಲಯದ ಪುಟ್ಟ ಗ್ರಾಮದ ಮನೆಯೊಂದರಲ್ಲಿ ತೊಟ್ಟಿಲಲ್ಲಿ ನಿದ್ರಿಸುತ್ತಿದ್ದ 9 ತಿಂಗಳ ಎಳೆಯ ಕಂದಮ್ಮನ ಮುಖದ ಮೇಲೆ ಮಲಗಿದ ಬೆಕ್ಕು ಮಗುವನ್ನು ಉಸಿರುಗಟ್ಟಿಸಿ ಸಾಯಿಸಿದೆ.
ಮಗುವನ್ನು ತೊಟ್ಟಿಲಲ್ಲಿ ಮಲಗಿಸಿದ ತಾಯಿ ಸ್ನೇಝನಾ ಮನೆಗೆಲಸದಲ್ಲಿ ತೊಡಗಿದ್ದಳು. ಕೆಲಸ ಮುಗಿಸಿ ಮಗುವಿನ ಬಳಿ ಬಂದ ತಾಯಿ ತೊಟ್ಟಿಲಲ್ಲಿ ಮಗುವಿನ ಬದಲು ಬೆಕ್ಕನ್ನು ಕಂಡು ಬೆದರಿದರು. ಅವಸರದಲ್ಲಿ ಬೆಕ್ಕನ್ನು ಓಡಿಸಿ ಮಗುವನ್ನು ಎತ್ತಿಕೊಂಡರು. ಆದರೆ, ಆ ವೇಳೆಗಾಗಲೇ ಮಗುವಿನ ಉಸಿರು ನಿಂತುಹೋಗಿತ್ತು.
ತೊಟ್ಟಿಲಲ್ಲಿ ಮಲಗಿದ್ದ ಕಂದಮ್ಮನನ್ನು ಕೊಂದ ಬೆಕ್ಕು
Follow Us