ಪೊಖಾರ: ನೇಪಾಳದ ಪೊಖಾರದಲ್ಲಿ ನಡೆಯುತ್ತಿರುವ 13ನೇ ಏಷ್ಯನ್ ಕ್ರೀಡಾಕೂಟದಲ್ಲಿ ಗುರುವಾರ ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರತಕ್ಕೆ ಒಟ್ಟು ಎಂಟು ಪದಕಗಳು ದೊರೆತಿವೆ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಅಗ್ರ ಶ್ರೇಯಾಂಕಿತ ಸಿರಿಲ್ ವರ್ಮಾ ಅವರು
ಪಾಕಿಸ್ತಾನದ ಮುರಾದ್ ಅಲಿ ಅವರ ವಿರುದ್ಧ 21-12, 21-17 ಅಂತರದಲ್ಲಿ
ಕ್ವಾರ್ಟರ್ ಫೈನಲ್ಸ್ ಗೆದ್ದು ಸೆಮಿಫೈನಲ್ ತಲುಪಿದ್ದಾರೆ..
ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್ಸ್ ಹಣಾಹಣಿಯಲ್ಲಿ ಗಾಯತ್ರಿ
ಗೋಪಿಚಂದ್ ಅವರು 21-15,
21-16 ಅಂತರದಲ್ಲಿ ಪಾಕ್‌ನ ಮಹೂರ್ ಶಹ್ಜಾದ್ ಅವರನ್ನು ಮಣಿಸಿ ಉಪಾಂತ್ಯಕ್ಕೆ
ತಲುಪಿದ್ದಾರೆ.. ಆ ಮೂಲಕ ಇವರಿಬ್ಬರು ಕಂಚಿನ ಪದಕ ಖಚಿತಪಡಿಸಿಕೊಂಡಿದ್ದಾರೆ