Sunday, October 2, 2022

ಧೂಮಪಾನ ಮಾಡದಿದ್ದರೆ ಆರು ಹೆಚ್ಚುವರಿ ರಜೆ

Follow Us

ಟೋಕಿಯೋ: ಜಪಾನಿನ ಮಾರ್ಕೇಟಿಂಗ್ ಸಂಸ್ಥೆಯೊಂದು ಧೂಮಪಾನದಿಂದ ದೂರ ಉಳಿಯುವ ಸಿಬ್ಬಂದಿಗೆ ಭರ್ಜರಿ ಕೊಡುಗೆ ಪ್ರಕಟಿಸಿದೆ. ಕಚೇರಿ  ಅವಧಿಯಲ್ಲಿ ಧೂಮಪಾನ ಮಾಡದಿದ್ದರೆ ಆರು ರಜೆ ನೀಡುವುದಾಗಿ ಹೇಳಿದೆ. ಸಂಬಳ ಸಹಿತ ರಜೆ ಪಡೆಯಲು ಈ ಸಿಬ್ಬಂದಿ ಅರ್ಹರಾಗಿದ್ದಾರೆ ಎಂದು ಅದು ಪ್ರಕಟಿಸಿದೆ. ಧೂಮಪಾನ ಮಾಡುವವರಿಗಿಂತ ಮಾಡದ ಸಿಬ್ಬಂದಿ ಹೆಚ್ಚಿನ ಕೆಲಸ ಮಾಡುತ್ತಿದ್ದಾರೆ. ನಮ್ಮ ಕಷ್ಟ ಪರಿಹರಿಸಿ ಎಂದು ಸಿಬ್ಬಂದಿಯೊಬ್ಬರು ಮನವಿ ಮಾಡಿದ್ದರು. ಸಂಸ್ಥೆ 29ನೇ ಮಹಡಿಯಲ್ಲಿ ಕಚೇರಿ ಹೊಂದಿದೆ. ಧೂಮಪಾನ ಮಾಡುವವರು ಪ್ರತಿ ಬಾರಿ ನೆಲ ಅಂತಸ್ತಿಗೆ  ಬಂದು ಧೂಮಪಾನ ಮಾಡಬೇಕಿತ್ತು. ಒಂದು ಬಾರಿ ಮೇಲಿನಿಂದ ಕೆಳಗೆ ಬಂದು ಧೂಮಪಾನ ಮಾಡಲು ಕನಿಷ್ಟ 15 ನಿಮಿಷ ತಗಲುತ್ತಿತ್ತು. ಇದೀಗ ಸಂಸ್ಥೆಯ ನಿರ್ಧಾರಕ್ಕೆ ಸಿಬ್ಬಂದಿ ಪುಲ್ ಖುಷಿ ಆಗಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ಕೃಷಿ ಸಚಿವ ಸುಧಾಕರ್ ಸಿಂಗ್ ರಾಜೀನಾಮೆ!

newsics.com ಬಿಹಾರ: ಬಿಹಾರ ಕೃಷಿ ಸಚಿವ ಸುಧಾಕರ್ ಸಿಂಗ್ ಅವರು ರಾಜೀನಾಮೆ ನೀಡಿದ್ದಾರೆ. ಸುಧಾಕರ್ ಸಿಂಗ್ ಅವರು ಸದಾ ರೈತರ ಪರವಾಗಿ ಧ್ವನಿ ಎತ್ತುತ್ತಿರುವ ಕೃಷಿ ಸಚಿವರು ಮೈತ್ರಿ ಸರ್ಕಾರದಲ್ಲಿ...

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಆರೋಗ್ಯ ಸ್ಥಿತಿ ಗಂಭೀರ

newsics.com ಉತ್ತರಪ್ರದೇಶ:‌ ಉತ್ತರಪ್ರದೇಶ ಮಾಜಿ ಮುಖ್ಯ ಮಂತ್ರಿ ಮುಲಾಯಂ ಸಿಂಗ್  ಅನಾರೋಗ್ಯದಿಂದ ಬಳಲುತ್ತಿದ್ದು, ಇದೀಗ ಅವರನ್ನು ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾದವ್ ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇದೀಗ ಅವರನ್ನು ಮೇದಾಂತ ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಲಾಗಿದೆ. ಸಿಂಗ್...

‘ಹಲೋ’ ಹೇಳದಿರಿ, ‘ವಂದೇ ಮಾತರಂ’ ಹೇಳಲು ಮರೆಯದಿರಿ!

newsics.com ಮಹಾರಾಷ್ಟ್ರ: ಫೋನ್‌ ರಿಸೀವ್‌ ಮಾಡುತ್ತಿದ್ದಂತೆ 'ಹಲೋ' ಬದಲಿಗೆ 'ವಂದೇ ಮಾತರಂ' ಹೇಳುವುದು ಕಡ್ಡಾಯವಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ಶನಿವಾರ ಆದೇಶ (ಜಿಆರ್) ಹೊರಡಿಸಿದೆ. ಸರ್ಕಾರಿ ಮತ್ತುಅನುದಾನಿತ ಸಂಸ್ಥೆಗಳಲ್ಲಿ ಕೆಲಸ ಮಾಡುವ ಎಲ್ಲಾ ಉದ್ಯೋಗಿಗಳು, ನಾಗರಿಕರು...
- Advertisement -
error: Content is protected !!