ವೆಲ್ಲಿಂಗ್ಟನ್: ನ್ಯೂಜಿಲೆಂಡ್ನ ನಾರ್ತ್ ಐಲ್ಯಾಂಡ್ ದ್ವೀಪದಲ್ಲಿ ಜ್ವಾಲಾಮುಖಿ ಸ್ಪೋಟಿಸಿ 24 ಜನರು ಮೃತಪಟ್ಟಿದ್ದಾರೆಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ದುರಂತದಲ್ಲಿ ಅನೇಕರು ಗಾಯಗೊಂಡಿದ್ದು, ಹಲವರು ನಾಪತ್ತೆಯಾಗಿದ್ದಾರೆ. ಮೃತರಲ್ಲಿ ವಿದೇಶಿ ಪ್ರವಾಸಿಗರು ಇದ್ದಾರೆ ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಅಧಿಕಾರಿಗಳು ತಿಳಿಸಿದ್ದಾರೆ.
ಜ್ವಾಲಾಮುಖಿ ಸ್ಪೋಟದಿಂದ ದಟ್ಟ ಹೊಗೆ ಆವರಿಸಿದ್ದು ಬೂದಿ ಆಗಸದೆತ್ತರಕ್ಕೆ ಚಿಮ್ಮಿದೆ. ಕಲ್ಲುಗಳು ಕೂಡ ಬಹು ಎತ್ತರಕ್ಕೆ ಹಾರಿದವು. ಆಗ ದ್ವೀಪದಲ್ಲಿ 50ಕ್ಕಿಂತ ಕಡಿಮೆ ಜನರಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನ್ಯೂಜಿಲ್ಯಾಂಡ್ ನಲ್ಲಿ ಜ್ವಾಲಾಮುಖಿ ಸ್ಪೋಟಿಸಿ 24 ಮಂದಿ ಸಾವು
Follow Us