ಪೇಶಾವರ: ಪಾಕಿಸ್ತಾನ ಮತ್ತೊಂದು ಹಿಂದೂ ದೇವಸ್ಥಾನದ ಬಾಗಿಲು ತೆರೆಯಲು ನಿರ್ಧರಿಸಿದೆ. ಪೇಶಾವರದಲ್ಲಿರುವ ಪಂಚ ತೀರ್ಥ ದೇವಸ್ಥಾನದ ಬಾಗಿಲು ತೆರೆಯಲು ಪಾಕಿಸ್ತಾನ ನಿರ್ಧರಿಸಿದೆ. ಇದೀಗ ದೇವಸ್ಥಾನ ಪರಿಸರದಲ್ಲಿ ಶುಚಿತ್ವ ಕಾರ್ಯ ನಡೆಯುತ್ತಿದೆ ಎಂದು ವರದಿಯಾಗಿದೆ. ಮಹಾ ಭಾರತದ ವೇಳೆ ಅಜ್ಞಾತವಾಸ ಸಂದರ್ಭದಲ್ಲಿ ಪಾಂಡವರು ಇಲ್ಲಿ ತಂಗಿದ್ದರು ಎಂಬ ನಂಬಿಕೆಯಿದೆ. . ದೇಶ ವಿಭಜನೆ ಬಳಿಕ ಪೇಶಾವರದಲ್ಲಿರುವ ಈ ದೇವಸ್ಥಾನದ ಬಾಗಿಲನ್ನು ಮುಚ್ಚಲಾಗಿತ್ತು.