ದುಬೈ: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೆಜ್ ಮುಷರಫ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದುಬೈನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪಾಕಿಸ್ತಾನದ ಸೇನಾ ಮುಖ್ಯಸ್ಥರಾಗಿ ಕೂಡ ಮುಷರಪ್ ಸೇವೆ ಸಲ್ಲಿಸಿದ್ದಾರೆ. ನವಾಜ್ ಶರೀಫ್ ಅವರನ್ನು ಪದಚ್ಯುತಗೊಳಿಸಿ ಮುಷರಪ್ ಪಾಕಿಸ್ತಾನದಲ್ಲಿ ಅಧಿಕಾರ ನಿರ್ವಹಿಸಿದ್ದರು. ಭಾರತದ ವಿರುದ್ಧ ನಡೆದ ಕಾರ್ಗಿಲ್ ದುಸ್ಸಾಹಸದಲ್ಲಿ ಮುಷರಪ್ ಪ್ರಮುಖ ಪಾತ್ರ ವಹಿಸಿದ್ದರು.