ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಭಾರತದ ಹೆಮ್ಮೆಯ ಯೋಧ ಅಭಿನಂದನ್ ಮತ್ತು ನಟಿ ಸಾರಾ ಅಲಿ ಖಾನ್ ಭಾರೀ ಸುದ್ದಿಯಲ್ಲಿದ್ದಾರೆ. ಪಾಕ್ ಪ್ರಜೆಗಳು ಇಂಟರ್ ನೆಟ್ ನಲ್ಲಿ ಹುಡುಕಾಡಿರುವ ವ್ಯಕ್ತಿಗಳ ಪೈಕಿ ಈ ಇಬ್ಬರೂ ಮೊದಲ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಎಫ್ -16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದ ಅಭಿನಂದನ್ ಸಾಹಸಕ್ಕೆ ಇಡೀ ಭಾರತವೇ ಬೆರಗಾಗಿತ್ತು. ಪಾಕಿಸ್ತಾನದ ಬಂಧನದಲ್ಲಿದ್ದ ಅಭಿನಂದನ್ ಅವರನ್ನು ಕೊನೆಗೆ ಪಾಕಿಸ್ತಾನ ಭಾರತಕ್ಕೆ ಒಪ್ಪಿಸಿತ್ತು. ಸಾರಾ ಅಲಿ ಖಾನ್ ಹಿಂದಿ ಚಿತ್ರರಂಗದಲ್ಲಿ ತಮ್ಮ ಅಭಿನಯದಿಂದಲೇ ಮನ ಗೆದಿದ್ದಾರೆ.