ನ್ಯೂಯಾರ್ಕ್: ದೇಶದಲ್ಲಿ ವಿವಾದದ ಕಿಡಿ ಹೊತ್ತಿಸಿರುವ ಪೌರತ್ವ ಕಾನೂನು ತಿದ್ದುಪಡಿ ಪರ ಅಮೆರಿಕದಲ್ಲಿ ಬೆಂಬಲ ವ್ಯಕ್ತವಾಗಿದೆ. ನ್ಯೂಯಾರ್ಕ್ ನಲ್ಲಿ ಸಾವಿರಾರು ಅನಿವಾಸಿ ಭಾರತೀಯರು ಕಾನೂನು ಬೆಂಬಲಿಸಿ ಘೋಷಣೆ ಕೂಗಿದರು. ಸರ್ಕಾರ ಸರಿಯಾದ ಕ್ರಮವನ್ನು ತೆಗೆದುಕೊಂಡಿದೆ ಎಂದು ಪೌರತ್ವ ಕಾನೂನು ಬೆಂಬಲಿಗರು ಸಮರ್ಥಿಸಿಕೊಂಡರು.