
ಢಾಕ; ಬಾಂಗ್ಲಾದೇಶದ ಗುಲ್ಷನ್ ಪ್ರದೇಶದ ಹೊಲಿ ಆರ್ಟಿಸನ್ ಬೇಕರಿ ಕೆಫೆ ಮೇಲೆ 2016ರಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ ಭಾಗಿಯಾಗಿದ್ದ ಏಳು ಉಗ್ರರಿಗೆ ಅಲ್ಲಿನ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ. ಓರ್ವ ಆರೋಪಿಯನ್ನು ಖುಲಾಸೆಗೊಳಿಸಲಾಗಿದೆ.
2016ರ ಜುಲೈ 1ರಂದು ಶಸ್ತ್ರಸಜ್ಜಿತ ಉಗ್ರರು ನಗರದ ಕೇಂದ್ರ ಭಾಗದ ಹೋಟೆಲ್‍ಗೆ ನುಗ್ಗಿ ಮನಸೋಚ್ಛೆ ಗುಂಡಿನ ದಾಳಿ ನಡೆಸಿದ್ದರು. ಇದರಲ್ಲಿ 9 ಇಟಲಿಯನ್ ಪ್ರಜೆಗಳು, 7 ಜಪಾನೀಯರು, ಓರ್ವ ಭಾರತೀಯ, ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿ 22 ಮಂದಿ ಮೃತಪಟ್ಟಿದ್ದರು.