ವಾಷಿಂಗ್ಟನ್: ಇರಾಕ್ ಮೇಲಿನ ಕ್ಷಿಪಣಿ ದಾಳಿಯನ್ನು ಅಮೆರಿಕ ತೀವ್ರಗೊಳಿಸಿದೆ. ಉತ್ತರ ಬಾಗ್ದಾದಿನಲ್ಲಿ ಅಮೆರಿಕ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ಹತರಾದವರಲ್ಲಿ ಹಿರಿಯ ಸೇನಾ ಅಧಿಕಾರಿಯೂ ಕೂಡ ಸೇರಿದ್ದಾರೆ ಎಂದು ಹೇಳಳಾಗುತ್ತಿದೆ. ಆದರೆ ಇದನ್ನು ಅಧಿಕೃತವಾಗಿ ದೃಢೀಕರಿಸಲಾಗಿಲ್ಲ. ಈ ಮಧ್ಯೆ ಅಮರಿಕಕ್ಕೆ ಎಚ್ಚರಿಕೆ ನೀಡಿರುವ ಇರಾನ್, ಸೇನಾಧಿಕಾರಿಯ ಹತ್ಯೆಗೆ ಸೂಕ್ತ ಪ್ರತೀಕಾರ ಕ್ರಮ ತೆಗೆದುಕೊಳ್ಳವುದಾಗಿ ಹೇಳಿದೆ.