ನ್ಯೂಯಾರ್ಕ್: ಸುದೀರ್ಘ ವ್ಯೋಮಯಾತ್ರೆಯ ಬಳಿಕ ಕ್ರಿಸ್ಟಿನಾ ಕೋಚ್ ಭೂಮಿಗೆ ಹಿಂತಿರುಗಿದ್ದಾರೆ. ಬರೋಬರಿ 11 ತಿಂಗಳ ಕಾಲ ಅವರು ಬಾಹ್ಯಾಕಾಶ ಯಾತ್ರೆ ಕೈಗೊಂಡಿದ್ದರು. ಇದು ಮಹಿಳೆಯೊಬ್ಬರು ಬಾಹ್ಯಾಕಾಶದಲ್ಲಿ ಕಳೆದ ಅತ್ಯಂತ ಸುದೀರ್ಘ ಅವಧಿಯಾಗಿದೆ. ಕ್ರಿಸ್ಟಿನಾ ಕೋಚ್ ಸಾಧನೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.