ಲಂಡನ್: ಬ್ರಿಟನ್ ನ ಹೌಸ್ ಆಫ್ ಕಾಮನ್ಸ್ (ಸಂಸತ್ತು) ನಲ್ಲಿ ಇದೇ ಮೊದಲ ಬಾರಿಗೆ ಎಳೆಕೂಸುಗಳುಳ್ಳ ಮಹಿಳಾ ಸಂಸದರಿಗೆ ಸ್ತನ್ಯಪಾನದ ಅವಕಾಶ ಕಲ್ಪಿಸಿದೆ.
2019ರ ಡಿಸೆಂಬರ್ ನಲ್ಲಿ ಸ್ಟೆಲ್ಲಾ ಕ್ರೀಸಿ ಪ್ರಸವದ ಸೌಲಭ್ಯಗಳನ್ನು ಪಡೆದ ಮೊದಲ ಸಂಸದೆ ಎಂಬ ದಾಖಲೆ ನಿರ್ಮಿಸಿದ್ದರು. ಈಗ ಹೌಸ್ ಆಫ್ ಕಾಮನ್ಸ್ ನ ಸ್ಪೀಕರ್ ಲಿಂಡ್ಸೆ ಹೊಯ್ಲೆ ಇಂದು ಪ್ರಕಟಿಸಿದ್ದಾರೆ.
2019ರ ನವೆಂಬರ್ ನಲ್ಲಿ ಸ್ಪೀಕರ್ ಆಗಿ ಅಧಿಕಾರ ಸ್ವೀಕರಿಸಿದ್ದ ಹೊಯ್ಸೆ, ಸ್ತನ್ಯಪಾನ ತಾಯಂದಿರ ಹಕ್ಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.