ಲಂಡನ್: ಭಾರತ ಸರ್ಕಾರ ಶ್ರೀಲಂಕಾದಲ್ಲಿ ಎಲ್‍ಟಿಟಿಇ ಉಗ್ರರನ್ನು ಸದೆಬಡಿಯಲು 1980ರ ದಶಕದಲ್ಲಿ ಬ್ರಿಟೀಷ್ ಖಾಸಗಿ ಪೈಲಟ್‍ಗಳನ್ನು ಬಳಸಿಕೊಂಡಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ.
ಇಂಗ್ಲೆಂಡ್ ಮೂಲದ ತನಿಖಾ ವರದಿಗಾರ ಫಿಲ್‍ಮಿಲ್ಲರ್ ಬರೆದಿರುವ ಕೀನೈ ಮಿನೈ ಪುಸ್ತಕದಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗಿದೆ.
ಭಾರತದ ಶಾಂತಿಪಾಲನಾ ಸಮಿತಿ ಬ್ರಿಟೀಷ್ ಪೈಲಟ್‍ಗಳನ್ನು ತನ್ನೊಂದಿಗೆ ಸೇರಿಸಿಕೊಂಡು ಕಾರ್ಯಾಚರಣೆ ನಡೆಸಲು ಮುಂದಾಗಿತ್ತು. ಆದರೆ, ಭಾರತದ ಪ್ರಗತಿಪರ ವಲಯದಿಂದ ಟೀಕೆಗಳು ವ್ಯಕ್ತವಾದ್ದರಿಂದ ಸೇನೆಯನ್ನು ಅಧಿಕೃತವಾಗಿ ಕಳುಹಿಸಲು ಇಂಗ್ಲೆಂಡ್ ಹಿಂದೇಟು ಹಾಕಿತ್ತು.
ಇಂಗ್ಲೆಂಡ್ ಜತೆ ರಹಸ್ಯ ಒಪ್ಪಂದದ ಮೂಲಕ ಅಂದಿನ ಪ್ರಧಾನಿ ರಾಜೀವ್‍ಗಾಂಧಿ, ಶ್ರೀಲಂಕಾದ ಅಧ್ಯಕ್ಷ ಜಯವರ್ಧನೆ ಅವರು ಬ್ರಿಟೀಷ್ ಖಾಸಗಿ ಪೈಲೆಟ್‍ಗಳನ್ನು ಯುದ್ಧಕಣಕ್ಕಿಳಿಸಿದ್ದರು ಎಂದು ಪುಸ್ತಕದಲ್ಲಿ ಹೇಳಲಾಗಿದೆ.
ಬ್ರಿಟೀಷ್ ಖಾಸಗಿ ಪೈಲಟ್ ಗಳ ನೆರವಿನಿಂದ ಎಲ್ಟಿಟಿಇ ಉಗ್ರರ ದಮನ!
Follow Us