ನವದೆಹಲಿ: ಭಾರತೀಯ ಸೇನೆ ಅಧಿಕಾರಿಗಳ ಮೇಲೆ ಪಾಕಿಸ್ತಾನದ ಇಂಟರ್ ಸರ್ವಿಸ್ ಇಂಟಲಿಜೆನ್ಸ್ (ಐಎಸ್ಐ) ಹನಿ ಟ್ರ್ಯಾಪ್ ಪ್ರಯೋಗ ಮಾಡುತ್ತಿದೆ ಎಂದು ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀಪಾದ ನಾಯಕ್ ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಉತ್ತರಿಸಿದ ಅವರು, ಸಶಸ್ತ್ರ ಪಡೆಗಳ ಅಧಿಕಾರಿಗಳನ್ನು ಸೆಳೆಯಲು ಶತ್ರು ರಾಷ್ಟ್ರದ ಗುಪ್ತಚರ ಏಜೆನ್ಸಿ ನಿರಂತರ ಯತ್ನ ನಡೆಸಿದೆ ಎಂದರು. ಈ ಬಗ್ಗೆ ಅಪಾದನೆ ಬಂದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ತಿಳಿಸಲಾಗಿದೆ ಎಂದಿದ್ದಾರೆ.
ಈ ವಿಷಯ ದೃಢಪಡಿಸಿಕೊಳ್ಳಲು ಗುಪ್ತಚರ ಮೂಲಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸುರಕ್ಷತಾ ಮಾಹಿತಿ ಮತ್ತು ದಾಖಲೆಗಳನ್ನು ಸಂರಕ್ಷಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಹನಿಟ್ರ್ಯಾಪ್ ಗೆ ಒಳಗಾಗಿದ್ದಾರೆ ಎನ್ನಲಾದ 150 ಮಂದಿಯನ್ನು ಗುರುತಿಸಲಾಗಿದೆ ಎಂದು ಶ್ರೀಪಾದ ನಾಯಕ್ ತಿಳಿಸಿದರು.
ಭಾರತೀಯ ಸೇನಾಧಿಕಾರಿಗಳ ಮೇಲೆ ಐಎಸ್ಐ ಹನಿ ಟ್ರ್ಯಾಪ್!
Follow Us