ಇಸ್ಲಾಮಾಬಾದ್: ಮಗಳು ಟಿವಿ ಧಾರಾವಾಹಿಯೊಂದರಲ್ಲಿ ದೇವರಿಗೆ ಆರತಿ ಎತ್ತುತ್ತಿದ್ದ ದೃಶ್ಯವನ್ನು ಅನುಕರಿಸಿದ್ದಕ್ಕೆ ಕೋಪಗೊಂಡು ಟಿವಿಯನ್ನೇ ಒಡೆದು ಹಾಕಿದ್ದಾರಂತೆ ಪಾಕಿಸ್ತಾನದ ಕ್ರಿಕೆಟಿಕ ಶಹೀದ್ ಅಫ್ರೀದಿ.
ಈ ಕುರಿತು ಅವರೇ ನೀಡಿರುವ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. “ನಾನು ಇದಕ್ಕೂ ಮುನ್ನ ಭಾರತದ ಖಾಸಗಿ ಹಿಂದಿ ವಾಹಿನಿಯಲ್ಲಿ ನನ್ನ ಪತ್ನಿ ಧಾರಾವಾಹಿ ವೀಕ್ಷಿಸುತ್ತಿದ್ದಾಗ ಟಿವಿಯನ್ನು ಒಡೆದು ಹಾಕಿದ್ದೆ. ಮಕ್ಕಳಿಗೆ ಅವನ್ನು ತೋರಿಸಬೇಡ ಎಂದು ಎಚ್ಚರಿಕೆ ನೀಡಿದ್ದೆ. ಆದರೆ ಇತ್ತೀಚಿಗೆ ನನ್ನ ಮಗಳು ಅದರಲ್ಲಿನ ಆರತಿ ಎತ್ತುವ ದೃಶ್ಯವನ್ನು ಅನುಕರಿಸುತ್ತಿದ್ದುದನ್ನು ಕಂಡು ಮತ್ತೊಮ್ಮೆ ಟಿವಿಯನ್ನು ಗೋಡೆಗೆ ಅಪ್ಪಳಿಸಿ ಒಡೆದುಹಾಕಿದೆ ”ಎಂದಿದ್ದಾರೆ.
ಮಗಳು ಆರತಿ ಮಾಡಿದ್ದಕ್ಕೆ ಟಿವಿ ಒಡೆದು ಹಾಕಿದ ಅಫ್ರೀದಿ
Follow Us